ಅನಾಮಿಕ ಮದ್ಯ ರೋಗಿಗಳ ಬಾಂದವ್ಯ ಕೂಟ

ಬ್ರಹ್ಮಾವರ, ಜೂ.2: ಅನಾಮಿಕ ಮದ್ಯ ರೋಗಿಗಳ ಬಾಂಧವ್ಯ ಕೂಟವು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಮದ್ಯಪಾನ ಒಂದು ರೋಗ ಎಂಬುದಾಗಿ ಜಾಗತಿಕ ವೈದ್ಯಕೀಯ ಸಂಘಟನೆ ಘೋಷಿಸಿದೆ. ಇದು ಗುಣಮುಖವಾಗದ ಖಾಯಿಲೆ. ಇದಕ್ಕೆ ಸೂಕ್ತ ಚಿಕಿತ್ಸೆ ಮತ್ತು ಮಾನಸಿಕ ದೃಡತೆಗೆ ಅಗತ್ಯ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಡಾ.ಮಹೇಶ್ ಐತಾಳ್, ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚನ ರೆ.ಫಾ.ಚಾರ್ಲ್ಸ್ ಸಲ್ದಾನಾ ಮೊದಲಾದವರು ಉಪಸ್ಥಿತರಿದ್ದರು.
Next Story





