Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕುಡಂಕುಳಂನಲ್ಲಿ ಇನ್ನೆರಡು ಅಣುವಿದ್ಯುತ್...

ಕುಡಂಕುಳಂನಲ್ಲಿ ಇನ್ನೆರಡು ಅಣುವಿದ್ಯುತ್ ಘಟಕ

►ರಶ್ಯದ ಜೊತೆ ಭಾರತ ಮಹತ್ವದ ಒಪ್ಪಂದ ►ಉಭಯದೇಶಗಳ ನಡುವೆ ಐದು ಒಡಂಬಡಿಕೆಗೆ ಸಹಿ

ವಾರ್ತಾಭಾರತಿವಾರ್ತಾಭಾರತಿ2 Jun 2017 9:59 PM IST
share
ಕುಡಂಕುಳಂನಲ್ಲಿ ಇನ್ನೆರಡು ಅಣುವಿದ್ಯುತ್ ಘಟಕ

  ಸೈಂಟ್‌ಪೀಟರ್ಸ್‌ಬರ್ಗ್ (ರಶ್ಯ),ಜೂ.2: ತಮ್ಮ ಮಧ್ಯೆ ಇರುವ ದಶಕಗಳ ‘ವಿಶೇಷ ಹಾಗೂ ವ್ಯೆಹಾತ್ಮಕ ಪಾಲುದಾರಿಕೆ’ಯನ್ನು ಗುರುವಾರ ಭಾರತ ಹಾಗೂ ರಶ್ಯ ಪುನರುಚ್ಚರಿಸಿದ್ದು, ತಮಿಳುನಾಡಿನ ಕುಡಂಕುಳಂನಲ್ಲಿ ಇನ್ನೂ ಎರಡು ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆ ಸೇರಿದಂತೆ ಐದು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸೈಂಟ್‌ಪೀಟರ್ಸ್‌ಬರ್ಗ್‌ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ ಸಂದರ್ಭದಲ್ಲಿ ಈ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು.

 ಈ ವರ್ಷ ಭಾರತ ಹಾಗೂ ರಶ್ಯಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ 70 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಉಭಯದೇಶಗಳ ನಡುವಿನ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ.

 ಪುಟಿನ್ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಪ್ರಧಾನಿ ನರೇಂದ್ರ ಮೋದಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಕುಡಂಕುಳ ಅಣುವಿದ್ಯುತ್ ಸ್ಥಾವರದ ಕೊನೆಯ ಘಟಕಗಳ ಸ್ಥಾಪನೆಗಾಗಿ ಏರ್ಪಟ್ಟ ಒಪ್ಪಂದವು ಎರಡೂ ದೇಶಗಳ ಬಾಂಧವ್ಯವನ್ನು ಬಲಪಡಿಸಲಿದೆ ಎಂದರು. ಅಣುಸ್ಥಾವರ ಘಟಕಗಳ ನಿರ್ಮಾಣಕ್ಕಾಗಿ ರಶ್ಯ ಸರಕಾರವು ಮುಂದಿನ ವರ್ಷದಿಂದ ಭಾರತಕ್ಕೆ 10 ವರ್ಷಗಳ ಅವಧಿಗೆ 4.2 ಶತಕೋಟಿ ಡಾಲರ್ ಸಾಲದ ನೆರವು ನೀಡಲಿದೆ ಎಂದು ರಶ್ಯದ ವಿತ್ತ ಸಚಿವ ಆ್ಯಂಟನ್ ಸಿಲುವಾನೊವ್ ತಿಳಿಸಿದ್ದಾರೆ.

ಈ ಒಪ್ಪಂದದಿಂದಾಗಿ ನಾಗರಿಕ ಅಣು ಶಕ್ತಿ ಕ್ಷೇತ್ರದಲ್ಲಿ ಭಾರತ-ರಶ್ಯ ನಡುವಿನ ಬಾಂಧವ್ಯ ಇನ್ನಷ್ಟು ಗಾಢವಾಗುವ ನಿರೀಕ್ಷೆಯಿದೆ.

    ಮೋದಿ ಹಾಗೂ ಪುತಿನ್ ನಡುವೆ ಮಾತುಕತೆಯ ಬಳಿಕ ಬಿಡುಗಡೆಗೊಳಿಸಲಾದ ‘21ನೇ ಶತಮಾನದ ದೃಷ್ಟಿಕೋನ’ ಎಂಬ ಶೀರ್ಷಿಕೆಯ ದಾಖಲೆಪತ್ರವನ್ನು ಬಿಡುಗಡೆಗೊಳಿಸಲಾಯಿತು. ‘‘ ನಮ್ಮ ದೇಶಗಳ ನಡುವೆ ಶಕ್ತಿಯ ಸೇತುವೆಯನ್ನು ನಿರ್ಮಿಸಲು ಹಾಗೂ ಅಣುಶಕ್ತಿ ಇಂಧನ, ಜಲ ಇಂಗಾಲ, ಜಲಶಕ್ತಿ ಹಾಗೂ ಪುನರ್‌ನವೀಕರಣಯೋಗ್ಯ ಇಂಧನ ಸಂಪನ್ಮೂಲ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯಗಳನ್ನು ವಿಸ್ತರಿಸಲು ಶ್ರಮಿಸಲಿದ್ದೇವೆ’’ ಎಂದು ದಾಖಲೆಪತ್ರವು ತಿಳಿಸಿದೆ.

 ಕುಡಕುಳಂ ಅಣುವಿದ್ಯುತ್ ಸ್ಥಾವರದ 5 ಹಾಗೂ 6ನೇ ರಿಯಾಕ್ಟರ್‌ಗಳನ್ನು ಭಾರತೀಯ ಅಣುಶಕ್ತಿ ನಿಗಮ (ಎನ್‌ಪಿಸಿಐಎಲ್) ಹಾಗೂ ರಶ್ಯದ ರೊಸಾಟೊಮ್ ಸಂಸ್ಥೆಯ ಸಹಸಂಸ್ಥೆಯಾದ ಜೆಎಸ್‌ಸಿ ಆಟಂಸ್ಟ್ರೊಯ್ ಎಕ್ಸ್‌ಪೋರ್ಟ್ ನಿರ್ಮಿಸಲಿದೆ. ಈ ಎರಡೂ ಘಟಕಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 1 ಸಾವಿರ ಮೆಗಾವ್ಯಾಟ್‌ಗಳಾಗಿವೆ.

 ಪ್ರಸ್ತುತ ಕುಡಂಕುಳಂನಲ್ಲಿ 1 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ರಿಯಾಕ್ಟರ್ ಕಾರ್ಯಾಚರಿಸುತ್ತಿದ್ದು, ಇನ್ನೊಂದು ಘಟಕ 1 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ರಿಯಾಕ್ಟರ್ ಈ ವರ್ಷ ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಇಷ್ಟೇ ಸಾಮರ್ಥ್ಯದ ಇನ್ನೆರಡು ಘಟಕಗಳು ಈಗ ನಿರ್ಮಾಣ ಹಂತದಲ್ಲಿವೆ.

ಪ್ರಧಾನಿ ಮೋದಿ ಹಾಗೂ ಪುತಿನ್ ಮಧ್ಯೆ 2015ರಲ್ಲಿ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ ಕುಡಂಕುಳಂ ಅಣುವಿದ್ಯುತ್ ಸ್ಥಾವರದ 5 ಹಾಗೂ 6ನೆ ಘಟಕದ ನಿರ್ಮಾಣಕ್ಕೆ 2016ರಲ್ಲಿ ಅಂಕಿತ ಹಾಕಬೇಕಾಗಿತ್ತು. ಆದರೆ ಘಟಕಗಳ ನಿರ್ಮಾಣಕ್ಕೆ ರಶ್ಯದ ಆರ್ಥಿಕ ನೆರವಿಗೆ ಸಂಬಂಧಿಸಿ ಉಂಟಾದ ಬಿಕ್ಕಟ್ಟಿನಿಂದ ಈ ಒಪ್ಪಂದಕ್ಕೆ ಸಹಿಬೀಳುವುದು ವಿಳಂಬಗೊಂಡಿತ್ತು.

 ಕುಡಂಕುಳಂನಲ್ಲಿ ಹೆಚ್ಚುವರಿ ಎರಡು ಅಣುಶಕ್ತಿ ಘಟಕಗಳ ಸ್ಥಾಪನೆಯ ಹೊರತಾಗಿ ಅಲ್ಲದೆ ಇನ್ನೂ ನಾಲ್ಕು ಒಪ್ಪಂದಗಳಿಗೆ ಉಭಯದೇಶಗಳು ಸಹಿಹಾಕಿವೆ

ಈ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಘೋಷಣೆಯೊಂದರಲ್ಲಿ ಎರಡೂ ದೇಶಗ ಎಲ್ಲಾ ವಿಧದ ಭಯೋತ್ಪಾದನೆಯನ್ನು ಖಂಡಿಸಿವೆ. ಸೈದ್ಧಾಂತಿಕ, ಧಾರ್ಮಿಕ, ಜನಾಂಗೀಯ, ರಾಜಕೀಯ ಹೀಗೆ ಯಾವುದೇ ಕಾರಣಕ್ಕಾಗಿಯೂ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲವೆಂದು ಉಭಯದೇಶಗಳು ಜಂಟಿ ಘೋಷಣೆಯಲ್ಲಿ ತಿಳಿಸವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X