ಸಂಜೆ ಪಾಲಿಟೆಕ್ನಿಕ್‌ಗೆ ಪ್ರವೇಶಾತಿ ಆರಂಭ
ಮಂಗಳೂರು, ಜೂ.2: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರಕಾರಿ/ ಸರಕಾರಿ ಸ್ವಾಮ್ಯದ ಕಾರ್ಖಾನೆ/ಕೈಗಾರಿಕೆ/ಸಂಸ್ಥೆಗಳಲ್ಲಿ ಎಸೆಸೆಲ್ಸಿ ನಂತರ 3 ವರ್ಷಗಳ ಕನಿಷ್ಠ ತಾಂತ್ರಿಕ ಅನುಭವ ಪಡೆದು ಖಾಯಂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಸಂಜೆ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡಲು 2017-18ನೆ ಸಾಲಿಗೆ ಕರ್ನಾಟಕ (ಸರಕಾರಿ)ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅರ್ಜಿಯನ್ನುwww.dte.kar.nic.in ಅಥವಾ www.kea.kar.nic.in ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿ 2017ರ ಜೂ.25ರವರೆಗೆ ಪಡೆಯಬಹುದು. ಹಾಗೂ ಸಂಬಂಧಪಟ್ಟ ಅರ್ಜಿಗಳನ್ನು ದಾಖಲೆಗಳು ಹಾಗೂ ಬ್ಯಾಂಕ್ ಚಲನ್‌ನೊಂದಿಗೆ ಜೂ.25ರೊಳಗೆ ಪಾಲಿಟೆಕ್ನಿಕ್‌ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-2211636 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





