ಕರಾವಳಿ ಪ್ರವೇಶಿಸಿದ ಮುಂಗಾರು
ಮಂಗಳೂರು, ಜೂ.2: ಕರಾವಳಿಯಾದ್ಯಂತ ನಿನ್ನೆಯಿಂದಲೇ ಸಾಧಾರಣ ಮಳೆ ಸುರಿಯಲಾ ರಂಭಿಸಿದ್ದು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿಯೇ ಮುಂಗಾರು ಮಾರುತ ಆಗಮಿಸಿದ ಲಕ್ಷಣಗಳು ಕಂಡುಬಂದಿವೆ.
ಜೂ.3ರೊಳಗೆ ಮುಂಗಾರು ಕರಾವಳಿ ಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಶುಕ್ರವಾರ ಸಂಜೆಯ ಬಳಿಕ ಮಳೆ ಬಿರುಸುಗೊಂಡಿದ್ದು, ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿನ ಉಷ್ಣಾಂಶ ಪಣಂಬೂರು ಕೇಂದ್ರದಲ್ಲಿ 23.3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.
ದಕ್ಷಿಣ ಕನ್ನಡ, ಉಡುಪಿ, ಹೊನ್ನಾವರ, ಭಟ್ಕಳ ಪ್ರದೇಶದಲ್ಲೂ ಉಷ್ಣಾಂಶದಲ್ಲಿ ಇಳಿಕೆಯಾಗಿದೆ.
ಮಳೆ ವಿವರ
ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು 10.4 ಮಿ.ಮೀ.
ಬಂಟ್ವಾಳ 9.1 ಮಿ.ಮೀ.
ಬೆಳ್ತಂಗಡಿ 16.3 ಮಿ.ಮೀ.
ಪುತ್ತೂರು 3.6 ಮಿ.ಮೀ.
ಸುಳ್ಯ 1.1 ಮಿ.ಮೀ.
Next Story





