Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭುವನೇಶ್ವರಿ ಹೆಗಡೆ ಎಂಬ ನಗೆಬುಗ್ಗೆ

ಭುವನೇಶ್ವರಿ ಹೆಗಡೆ ಎಂಬ ನಗೆಬುಗ್ಗೆ

ಡಾ.ಮುರಲೀ ಮೋಹನ, ಚೂಂತಾರುಡಾ.ಮುರಲೀ ಮೋಹನ, ಚೂಂತಾರು2 Jun 2017 11:59 PM IST
share
ಭುವನೇಶ್ವರಿ ಹೆಗಡೆ ಎಂಬ ನಗೆಬುಗ್ಗೆ

ಇಂದು (ಜೂನ್ 3)ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಮಧ್ಯಾಹ್ನ 4:30ರಿಂದ ಭುವನೇಶ್ವರಿ ಹೆಗಡೆ ಅವರಿಗೆ ಅವರ ಅಭಿಮಾನಿಗಳು ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.


ನಗು ಎನ್ನುವುದು ಒಂದು ಕಲೆ. ನಗಿಸುವುದು ಇನ್ನೊಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡುಕೊಳ್ಳುತ್ತಾರೆ. ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿಗಳು ತಾವು ನಗುವುದರ ಜೊತೆಗೆ ಇತರರನ್ನು ನಗಿಸಿ ಅವರ ನಗುವಿನಲ್ಲಿ ತಮ್ಮ ನೋವನ್ನು ಮರೆಯುತ್ತಾರೆ. ಅಂತಹಾ ವ್ಯಕ್ತಿಗಳ ಜೊತೆಗೆ ನಾವು ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಬಹುದು. ಮಾನಸಿಕ ಒತ್ತಡ ಕಡಿಮೆಯಾಗಿ, ಹೆಚ್ಚು ನಗುತ್ತಾ ನೂರು ಕಾಲ ಸುಖವಾಗಿ ಬದುಕಬಹುದು. ಇಂತಹಾ ವ್ಯಕ್ತಿಗಳ ಸಾಲಿಗೆ ಯಾವತ್ತೂ ಮೊದಲಿಗರಾಗಿ ಸೇರುವ ಅರ್ಹತೆ ಇರುವವರು ನಮ್ಮ ಭುವನೇಶ್ವರಿ ಹೆಗಡೆಯವರು.

ಕನ್ನಡದ ಹಾಸ್ಯ ಸಾಹಿತ್ಯದ ಪ್ರಖ್ಯಾತರ ನಡುವೆ ಭುವನೇಶ್ವರಿ ಹೆಗಡೆಯವರಿಗೆ ವಿಶಿಷ್ಟ ಸ್ಥಾನವಿದೆ. ಭು.ಹೆ. ಎಂಬ ಸಂಕ್ಷಿಪ್ತ ನಾಮದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಯೆ ಮೂಡಿಸಿರುವ ಭುವನೇಶ್ವರಿ ಹೆಗಡೆಯವರು, ಅರ್ಥಶಾಸ್ತ್ರದ ಪ್ರಾಧ್ಯಾಪಕರು ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಅವರನ್ನು ಕನ್ನಡ ಪ್ರಾಧ್ಯಾಪಕಿ ಎಂದೇ ತಿಳಿದುಕೊಂಡವರು ಅನೇಕ. ಅದು ಅವರ ಸಾಹಿತ್ಯ ನಿರ್ಮಿತಿಗೆ ಸಿಕ್ಕ ಉಡುಗೊರೆ. ತಮ್ಮದೇ ಶೈಲಿಯಲ್ಲಿ ಹಾಸ್ಯ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಭುವನೇಶ್ವರಿ ಹೆಗಡೆಯವರು ಉಳಿದವರಿಗಿಂತ ಬಹಳ ಭಿನ್ನ. ತಬ್ಬಿಬ್ಬಾಗಿಸುವ ವ್ಯಂಗ,್ಯ ಮನಸ್ಸನ್ನು ಚುಚ್ಚಿ ನೋಯಿಸುವ ಕಟಕಿ, ತನ್ನನ್ನು ಹೊರತುಪಡಿಸಿ ಇತರರೂ ನಿಕೃಷ್ಟ ಎನ್ನುವ ಅಪಹಾಸ್ಯ ಇದ್ಯಾವುದೂ ಇವರ ಸಾಹಿತ್ಯ ಲೋಕದಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಸಿಗಲಿಕ್ಕಿಲ್ಲ.

ತಮ್ಮ ಕಾಲದ ಎಲ್ಲ ಬದಲಾವಣಿಗಳಿಗೆ ತಕ್ಷಣವೇ ಸ್ಪಂದಿಸಿ ಕಾಲಕ್ಕೆ ತಕ್ಕಂತೆ ಕೊಲ ಎಂಬಂತೆ, ಕುಟುಂಬ ಸೌಖ್ಯ, ಮನೆ ಮತ್ತು ವೃತ್ತಿವಲಯದ ಸ್ತ್ರೀಲೋಕ ಪರಿಸರ ಕಾಳಜಿ ಮಾನವ ಪ್ರೇಮ ಮೊದಲಾದ ಎಲ್ಲ ಜೀವ ಪರ ಮೌಲ್ಯಗನ್ನು ತಮ್ಮಿಳಗೆ ಆವರ್ತಿಸಿಕೊಂಡಿರುವ ಅವರ ಬರಹಗಳು ಭುವನೇಶ್ವರಿ ಹೆಗಡೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದರೂ ಅತಿಶಯೋಕ್ತಿಯಲ್ಲ. ದೈನಂದಿನ ಜೀವನದಲ್ಲಿ ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು, ಸನ್ನಿವೇಶಗಳು ಸಂಪರ್ಕಕ್ಕೆ ಬರುವ ವ್ಯಕ್ತಿತ್ವಗಳು ನೋಡುವ ನೋಟದಲ್ಲಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೆಗೆಟಿವ್ ಆಗಿ ಬಿಡಬಹುದಾದ ಅಪಾಯದಿಂದ ತಪ್ಪಿಸಿಕೊಂಡು ಭುವನೇಶ್ವರಿ ಅವರ ದೃಷ್ಟಿಯಲ್ಲಿ ಸಕಾರಾತ್ಮಕವಾಗಿ ಬದಲಾಗುವ ಇಂದ್ರಜಾಲ ಅವರ ಪ್ರತಿಯೊಂದು ಬರಹದಲ್ಲಿ ಹೊಳೆದುಬಿಡುತ್ತದೆ.

ಅವರೇ ಹೇಳಿಕೊಳ್ಳುವಂತೆ ‘‘ನಗೆ ಮೇರೆ ಮೀರಿದ ಮಹಾಪೂರದಂತೆ ಅದಕ್ಕೊಂದು ದಾರಿ ಕೊಡಲೇ ಬೇಕಾದ ಪ್ರಸಂಗದಿಂದ’’ ನಗೆ ಲೇಖನಗಳ ಸೃಷ್ಟಿ ಆಗಿರುವುದಂತೂ ಸತ್ಯ. ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲ ಎಂಬ ಸಣ್ಣ ಕುಗ್ರಾಮದಲ್ಲಿ ಮುಕ್ತವಾಗಿ ಗಾಳಿ ಬೆಳಕಿಗೆ ತೆರೆದುಕೊಂಡು ಬೆಳೆದ ಭುವನೇಶ್ವರಿ ಹೆಗಡೆಯವರಿಗೆ, ನಗರ ಪ್ರದೇಶದಲ್ಲಿ ತಮ್ಮ ಬದುಕಿನ ಎಲ್ಲಾ ಇತಿ ಮಿತಿಗಳ ನಡುವೆ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತೆ ಮಾಡಿರುವುದು, ಅವರು ಆಯ್ಕೆ ಮಾಡಿಕೊಂಡ ‘‘ನಗುವೆ ನಗಿಸುವ, ನಗಿಸಿ ನಗುತ’’ ಬಾಳುವ ದೀಕ್ಷೆ ಎಂಬುದಂತೂ ಸತ್ಯವಾದ ಮಾತು.

ಭುವನೇಶ್ವರಿ ಹೆಗಡೆ ಅವರು ಬರೆಯುವಷ್ಟೇ ಮಾತಿನಲ್ಲೂ ನಿಸ್ಸಿಮರು ಅವರು ಮಾತನಾಡಲು ಆರಂಭಿಸಿದರೆ ಉತ್ತರ ಕನ್ನಡದ ಅಡಿಕೆ ತೋಟದ ನಡುವಿನ ಹೆಗಡೆಯವರ ಚಾವಡಿಯ ಮನೆಯಿಂದ ಹೊರಟು ನಾಡೆಲ್ಲ ಸುತ್ತಿ ಕೊನೆಗೆ ಮುಕ್ತಾಯವಾಗುವುದು ಅವರ ಎರಡನೆ ತವರು ಮನೆಯಾದ ನಮ್ಮ ಮಂಗಳೂರಿನಲ್ಲಿಯೇ. ಹುಟ್ಟಿದ್ದು ಉ.ಕ.ದಲ್ಲಾದರೂ ಅವರ ಕಾರ್ಯಕ್ಷೇತ್ರ ಮತ್ತು ಸಾಹಿತ್ಯದ ಕೃಷಿ ಕ್ಷೇತ್ರ ಮಂಗಳೂರೇ ಆಗಿರುತ್ತದೆ. ಹಲವು ವರ್ಷಗಳಿಂದ ಮಂಗಳೂರಿನಲ್ಲಿಯೇ ವಾಸವಾಗಿ ನಮ್ಮ ಕುಡ್ಲದ ಹೆಣ್ಣು ಮಗಳಾಗಿ ಬಿಟ್ಟಿದ್ದಾರೆ. ಆದರೆ ಅವರ ಮಾತಿನ ಧಾಟಿಯಲ್ಲಿ ಎಲ್ಲಿಯೂ ಹುಟ್ಟೂರಾದ ಉ.ಕ. ಜಿಲ್ಲೆಯ ತಿಳಿಹಾಸ್ಯದ ಬುಗ್ಗೆ ಯಾವತ್ತು ಬತ್ತಿಲ್ಲ.

‘ಇನ್ನೂ ಕೇಳಬೇಕು, ಛೇ ಇಷ್ಟು ಬೇಗ ನಿಲ್ಲಿಸಿಬಿಟ್ಟರಲ್ಲ’ ಎಂದೆನಿಸುವ ರೀತಿಯಲ್ಲಿ ಕೇಳುಗರನ್ನು ಮಂತ್ರಮುಗ್ಧರಾಗುವಂತೆ ಮಾತಾಡುವ ಕಲೆ ಅವರಿಗೆ ದೈವದತ್ತವಾಗಿ ಬಂದಿದೆ. ಅವರ ಮಾತು ಎಂದಿಗೂ ಯಾರಿಗೂ ಬೇಸರ ನೋವು ತರಿಸಿದ ನಿದರ್ಶನಗಳೇ ಇಲ್ಲ. ಉತ್ತರ ಕನ್ನಡದ ಸಮೃದ್ಧ ಪ್ರಕೃತಿ ಮತ್ತು ತುಂಬಿದ ಕುಟುಂಬದ ಬದುಕು ಅವರಿಗೆ ಅನನ್ಯ ಜೀವನಾನುಭವ ನೀಡಿದೆ. ಇದರ ಜೊತೆಗೆ ಒಳ್ಳೆಯ ಓದು, ವ್ಯಕ್ತಿತ್ವಗಳನ್ನು ಸನ್ನಿವೇಶಗಳನ್ನು ಆಳವಾಗಿ ಗ್ರಹಿಸುವ ಸಂವೇದನಾ ಶೀಲ ಮನಸ್ಸು, ಕನ್ನಡ, ತುಳು, ಸಂಸ್ಕೃತ, ಇಂಗ್ಲಿಷ್ ಈ ಎಲ್ಲ ಭಾಷೆಗಳ ವಿಶೇಷ ಜ್ಞಾನ ಅವರನ್ನು ಓರ್ವ ಉತ್ತಮ ವಾಗ್ಮಿ ಮತ್ತು ಲೇಖಕಿಯನ್ನಾಗಿ ಮಾಡಿದೆ. ಇದು ಅವರ ಪ್ರಬಂಧಗಳ ವಸ್ತು ವೈವಿಧ್ಯದಲ್ಲಿ, ಚಾಕಚಕ್ಯತೆಯ ನಿರೂಪಣೆಯ ಲವಲವಿಕೆಯಲ್ಲಿ, ಭಾಷಾ ನೈಪುಣ್ಯದ ಪದ ಚಮತ್ಕಾರಗಳಲ್ಲಿ ಸಾಬೀತಾಗುತ್ತದೆ.

ಕಿರು ಪರಿಚಯ ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಹಾಸ್ಯ ಬರಹಗಾರ್ತಿ ಮತ್ತು ಹಾಸ್ಯ ವಾಗ್ಮಿಯಾಗಿ ಗುರುತಿಸಿಕೊಂಡಿರುವ ಭುವನೇಶ್ವರಿ ಹೆಗಡೆಯವರು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಮನಃಶಾಸ್ತ್ರದಲ್ಲಿ ಎಂ. ಎ ಪದವಿ ಪಡೆದಿರುತ್ತಾರೆ. ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮೊನ್ನೆ ಮೇ ತಿಂಗಳ 31ರಂದು ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ.

ಇವರ 500ಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಮುಗುಳು ನಕ್ಕು ಹಗುರಾಗಿ’ ‘ಎಂಥದ್ದು ಮಾರಾಯ್ರೆ’ ‘ವಲಲ ಪ್ರತಾಪ’, ‘ಹಾಸಭಾಸ’ ‘ಮೃಗಯಾ ವಿನೋದ’, ‘ಬೆಟ್ಟದ ಭಾಗೀರಥಿ’ ‘ಮಾತನಾಡಲು ಮಾತೇಬೇಕೆ’ ‘ಪುಟ್ಟಿಯ ಪಟ್ಟೆ ಹುಲಿ’, ‘ಕೈಗುಣ ಬಾಯ್ಗುಣ’ ಎಂಬ ಕೃತಿಗಳನ್ನು ಇವರು ರಚಿಸಿದ್ದಾರೆ. ಭುವನೇಶ್ವರಿಯವರ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಪುಸ್ತಕವು ಸಪ್ನಬುಕ್ ಹೌಸ್‌ನಿಂದ ಪ್ರಕಟಗೊಂಡಿದೆ. ಇವರು ‘ಸೂರು ಸಿಕ್ಕದಲ್ಲಾ’, ‘ಕಛೇರಿ ವೈಭವಂ, ‘ವಸಂತ ವ್ಯಾಧಿ’ ‘ಕಾವ್ಯ ಕೋಲಾಹಲ’ ಎಂಬ ರೇಡಿಯೋ ನಾಟಕಗಳನ್ನು ರಚಿಸಿದ್ದಾರೆ.

ಇವರ ‘ಸಭಾಕಂಪನ’, ‘ಮೂಢ ನಂಬಿಕೆಗಳ ಬೀಡಿನಲ್ಲಿ’, ‘ಸುಲಭದಲ್ಲಿ ಸಜ್ಜನರಾಗಲಾರಿರಿ’, ‘ನಕ್ಕೂ ಹಗುರಾಗಿ’ ಮತ್ತಿತರ ಪ್ರಬಂಧಗಳು ಶಾಲಾ ಕಾಲೇಜುಗಳ ಪಠ್ಯಗಳಾಗಿ ಆಯ್ಕೆಯಾಗಿವೆ. ಭುವನೇಶ್ವರಿಯವರು ಅಂಕಣಗಾರ್ತಿಯಾಗಿಯೂ ಪ್ರಸಿದ್ಧರು. ವಾರ್ತಾಭಾರತಿಯೂ ಸೇರಿ (ನಗೆಮೊಗೆ)ಹಲವು ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗಿವೆ. ಭುವನೇಶ್ವರಿಯವರು ಸಲ್ಲಿಸಿದ ವಿಫುಲ ಸಾಹಿತ್ಯ ಸೇವೆಯಿಂದಾಗಿ ಹಲವಾರು ಪುರಸ್ಕಾರಗಳು ಅವರನ್ನರಸಿ ಬಂದಿವೆ.

ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, (1988-1997) ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ 1997-2000, ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ(1998), ಅಕ್ಷರಶ್ರೀ ರಾಜ್ಯ ಪ್ರಶಸ್ತಿ (2008), ಶಿರಸಿಯ ಬಿ. ಹೆಚ್. ಶ್ರೀಧರ ಪ್ರಶಸ್ತಿ (2014), ಬಿಗ್ ಎಫ್‌ಎಂ ಕನ್ನಡತಿ (2015), ಹುಬ್ಬಳ್ಳಿಯ ಅವ್ವ ಪ್ರಾತಿಷ್ಠಾನದ ಅವ್ವ ಪ್ರಶಸ್ತಿ (2017) ಇವರಿಗೆ ಒಲಿದ ಪ್ರಶಸ್ತಿಗಳು. 2011ರಲ್ಲಿ ಅಮೆರಿಕದ ಕ್ಯಾಲಿಪೋರ್ನಿಯದಲ್ಲಿ ಕನ್ನಡ ಸಾಹಿತ್ಯರಂಗ ಹಾಗೂ ಕ್ಯಾಲಿಪೋರ್ನಿಯ ಕನ್ನಡ ಕೂಟದ ಸಾಹಿತ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. 2011ರಲ್ಲಿ ಲಂಡನ್ ನಗರದ ಕನ್ನಡ ಸಂಗಮ ಸಂಸ್ಥೆ ಏರ್ಪಡಿಸಿದ ವಿಶ್ವಕನ್ನಡ ಸಮ್ಮೇಳನ ಯುರೋಪ್ 2011 ಇದರಲ್ಲಿ ಕನ್ನಡ ಹಾಸ್ಯಸಾಹಿತ್ಯ ಕುರಿತಾಗಿ ಉಪನ್ಯಾಸ ನೀಡಿದ್ದಾರೆ. 2012ರಲ್ಲಿ ಅಮೆರಿಕದ ಬೋಸ್ಟನ್ ಕನ್ನಡ ಕೂಟದ ರತ್ನ ಮಹೋತ್ಸವವನ್ನು ಉದ್ಘಾಟಿಸಿ ಭಾಷಣ ಮಾಡಿದ್ದಾರೆ.

 ಪ್ರಸ್ತುತ ಮಂಗಳೂರಿನ ಕದ್ರಿಯಲ್ಲಿ ಪತಿ ಶಂಭು ಹೆಗಡೆ ಮತ್ತು ಮಗಳು ಆಭಾ ಹೆಗಡೆ ಅವರೊಂದಿಗೆ ನೆಲೆಸಿದ್ದಾರೆ. ಇಂದು (ಜೂನ್ 3) ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಮಧ್ಯಾಹ್ನ 4:30ರಿಂದ ಭುವನೇಶ್ವರಿ ಹೆಗಡೆ ಅವರಿಗೆ ಅವರ ಅಭಿಮಾನಿಗಳು ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ 

share
ಡಾ.ಮುರಲೀ ಮೋಹನ, ಚೂಂತಾರು
ಡಾ.ಮುರಲೀ ಮೋಹನ, ಚೂಂತಾರು
Next Story
X