ಎಸ್ಸೆಸ್ಸೆಫ್ ಪ್ರತಿಭಟನೆ ಯಶಸ್ಸಿಗೆ ಬಜ್ಪೆ ಸೆಕ್ಟರ್ ಕರೆ
ಮಂಗಳೂರು, ಜೂ.3: ಗೋಹತ್ಯೆ ನಿಷೇಧ ಕಾನೂನನ್ನು ವಿರೋಧಿಸಿ ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಇಂದು ಮಂಗಳೂರಿನಲ್ಲಿ ಆಯೋಜಿರುಸುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಬಜ್ಪೆ ಸೆಕ್ಟರ್ ಎಸ್ಸೆಸ್ಸೆಫ್ ಕರೆ ನೀಡಿದೆ.
ದೇಶಾದ್ಯಂತ ಗೋವಿನ ಬಗ್ಗೆ ಚರ್ಚೆ ಗರಿಗೆದರಿದೆ. ಗೋ ರಾಜಕೀಯ ತಾರಕಕ್ಕೇರಿದೆ. ಜನರ ಜೀವಕ್ಕಿಲ್ಲದ ಬೆಲೆ ಜಾನುವಾರುಗಳಿಗೆ ದಕ್ಕಿದೆ. ಇದೇ ವೇಳೆ ದೇಶದ ಒಂದು ವಿಭಾಗ ಜನರ ಪ್ರಮುಖ ಪೌಷ್ಟಿಕ ಆಹಾರದ ಮೇಲೆ ಕೇಂದ್ರ ಸರಕಾರ ದಬ್ಬಾಳಿಕೆ ನಡೆಸುತ್ತಿದೆ. ಗೋಹತ್ಯೆ ನಿಷೇಧ ಮತ್ತು ಗೋ ಮಾರಾಟದ ಬಗ್ಗೆ ಕೇಂದ್ರ ಸರಕಾರ ವಿಧಿಸಿರುವ ನಿರ್ಬಂಧ ಜನ ವಿರೋಧಿ ನಡೆಯಾಗಿದೆ. ಈ ತುಘಲಕ್ ದರ್ಬಾರನ್ನು ಖಂಡಿಸಿ ಪ್ರತಿಭಟಿಸುವುದು ಪ್ರತಿಯೋರ್ವ ಭಾರತೀಯನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ಇಂದು ಸಂಜೆ ಮೂರು ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ನಾಡಿನ ಸಾಂಘಿಕ, ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕರು ನೇತೃತ್ವದಲ್ಲಿ ಸಭೆ ನಡೆಯಲಿದೆ. ಎಲ್ಲಾ ಎಸ್ಸೆಸ್ಸೆಫ್ ಕಾರ್ಯಕರ್ತರು ಮತ್ತು ಸಮುದಾಯ ಪ್ರೇಮಿಗಳು ತಮ್ಮ ಗೆಳೆಯರ ಜತೆಗೂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಅಧ್ಯಕ್ಷ ಬಿ.ಎ.ಶಾಕಿರ್ ಅಹ್ಮದ್ ಎಮ್ಮೆಸ್ಸಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.