Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಚ್ಚರಿ ಮೂಡಿಸುವ ಲಡ್ಡು, ಆಮ್ಲೆಟ್ ಮಾವಿನ...

ಅಚ್ಚರಿ ಮೂಡಿಸುವ ಲಡ್ಡು, ಆಮ್ಲೆಟ್ ಮಾವಿನ ಹಣ್ಣು!

ಪಿಲಿಕುಳದಲ್ಲಿ ವಸಂತೋತ್ಸವಕ್ಕೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ3 Jun 2017 2:02 PM IST
share
ಅಚ್ಚರಿ ಮೂಡಿಸುವ ಲಡ್ಡು, ಆಮ್ಲೆಟ್ ಮಾವಿನ ಹಣ್ಣು!

               ಆಮ್ಲೆಟ್ ಮಾವಿನಹಣ್ಣಿನೊಂದಿಗೆ ಸುಮನ್


ಮಂಗಳೂರು, ಜೂ. 3: ಆಮ್ಲೆಟ್, ಲಡ್ಡು, ರಾಜ್‌ಗಿರಾ ಮೊದಲಾದ ಮಾವಿನ ಹಣ್ಣುಗಳನ್ನು ನೋಡಿದ್ದೀರಾ? ರುಚಿ ಸವಿದಿದ್ದೀರಾ? ಇಲ್ಲವಾದಲ್ಲಿ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾಥ್‌ನಲ್ಲಿ ಇಂದು ಆರಂಭಗೊಂಡಿರುವ ವಸಂತೋತ್ಸವಕ್ಕೊಮ್ಮೆ ಭೇಟಿ ನೀಡಿ ಹಣ್ಣುಗಳನ್ನು ಖರೀದಿಸಿ ರುಚಿ ಸವಿಯಬಹುದು.

ಚಿಕ್ಕಬಳ್ಳಾಪುರದ ಚಿಂತಾಮಣಿ, ಮುದ್ದಳ ಹಳ್ಳಿಯ ಈ ವಿಶೇಷ ಮಾವಿನ ಹಣ್ಣಿನ ತಳಿಗಳು ವಸಂತೋತ್ಸವದ ಅಂಗವಾಗಿ ಯೋಜಿಸಲಾಗಿರುವ ಪ್ರದರ್ಶನ ಮಳಿಗೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆಮ್ಲೆಟ್ ಹೆಸರಿನ ಮಾವಿನ ಹಣ್ಣು ಸುಮಾರು ಒಂದರಿಂದ ಒಂದೂವರೆ ಕೆಜಿ ತೂಗುತ್ತದೆ. ಕೆಜಿಯೊಂದಕ್ಕೆ ಈ ಮಾವಿನ ಹಣ್ಣು 80 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

18ರ ಹರೆಯದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆಯುತ್ತಿರುವ ಸುಮನ್ ಎಂಬ ಯುವಕ ತನ್ನ ತೋಟದಲ್ಲಿ ಬೆಳೆದ ಈ ಹಣ್ಣುಗಳನ್ನು ಪ್ರದರ್ಶನದಲ್ಲಿ ಮಾರಟಕ್ಕಿಟ್ಟಿದ್ದಾರೆ. ರಜೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತಾನು ಈ ಪ್ರದರ್ಶದಲ್ಲಿ ಭಾಗವಹಿಸುತ್ತಿರುವುದಾಗಿ ಸುಮನ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದರು.

ವೈವಿಧ್ಯಮಯ ಹಲಸು, ವಿಭಿನ್ನ ರುಚಿ...!

ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿ ಬಲಸು ಬೆಳೆಗಾರರ ಸಂಘವು ತಮ್ಮ ಊರಿನಲ್ಲಿ ತೋಟದಲ್ಲಿ ಹೇರಳವಾಗಿ ಬೆಳೆಯುವ, ರುಚಿಕರ ಹಲಸುಗಳನ್ನು ಈ ಬಾರಿಯೂ ಮಾರಾಟಕ್ಕಿಟ್ಟಿದೆ. ಏಕಾದಶಿ ಹಲಸು, ಚಂದ್ರಹಲಸು, ಕೆಂಪು ಮತ್ತು ಹಳದಿ ರುದ್ರಾಕ್ಷಿ, ಬಂಗಾರದ ಹಲಸು ಎಂಬ ವೈವಿಧ್ಯಮಯ ತಳಿಯ ವಿಭಿನ್ನ ರುಚಿಯ ಸುಮಾರು ಒಂದು ಕೆಜಿ ತೂಕದಿಂದ ಹಿಡಿದು ಸುಮಾರು 10 ಕೆಜಿ ತೂಕದವರೆಗಿನ ವೈವಿಧ್ಯಮಯ ಹಲಸುಗಳು ಈ ಮಳಿಗೆಯಲ್ಲಿದೆ.

"ತೂಬಗೆರೆಯಲ್ಲಿ ಹಲಸು ಭಾರೀ ಬೇಡಿಕೆಯನ್ನು ಪಡೆದಿದೆ. ಇದೀಗ ಮಂಗಳೂರಿಗೂ ಹಲವಾರು ರೀತಿಯ ಪ್ರದರ್ಶನಗಳಲ್ಲಿ ಹಲಸಿಗೆ ಬೇಡಿಕೆ ದೊರಕಿದೆ. ಮಾತ್ರವಲ್ಲದೆ, ನ್ಯಾಚುರಲ್ ಐಸ್‌ಕ್ರೀಮ್‌ನವರು ಸುಮಾರು 60ರಿಂದ 80 ಟನ್‌ಗಳಷ್ಟು ಹಲಸನ್ನು ಖರೀದಿಸುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡಿ ನಮ್ಮ ಪಾಲಿಗೆ ಅನ್ನದಾತರಾಗಿದ್ದಾರೆ'' ಎಂದು ಸಂಘದ ಕಾರ್ಯದರ್ಶಿ ಹಾಗೂ ಹಲಸು ಬೆಳೆಗಾರರೂ ಆಗಿರುವ ರವಿಕುಮಾರ್ ಹೇಳುತ್ತಾರೆ.

ಕೆಂಪು ಮತ್ತು ಹಳದಿ ರುದ್ರಾಕ್ಷಿ ರುಚಿ ಹಾಗೂ ಬಣ್ಣದಲ್ಲಿಯೂ ವಿಭಿನ್ನವಾಗಿದ್ದು, ಮರವೊಂದು ವರ್ಷಕ್ಕೆ 150ರಿಂದ 300ರಷ್ಟು ಹಣ್ಣುಗಳನ್ನು ನೀಡುತ್ತದೆ. ಈ ಹಣ್ಣಿನ ವಿಶೇಷೆಂದರೆ, ಈ ಹಣ್ಣುಗಳು ನಾಲ್ಕು ಕೆಜಿಗಿಂತ ಜಾಸ್ತಿ ಇರುವುದಿಲ್ಲ. ಒಂದು ಕಾಲದಲ್ಲಿ ಮರದಿಂದ ಬಿದ್ದ ಹಾಳಾಗಿ ಹೋಗುತ್ತಿದ್ದ ಹಣ್ಣುಗಳು ಇಂದು ಭಾರೀ ಬೇಡಿಕೆಯೊಂದಿಗೆ ಬೆಳೆಯುವ ಕೃಷಿಕನಿಗೂ ತೃಪ್ತಿಯ ಜೀವನಕ್ಕೆ ಸಹಕಾರಿಯಾಗಿದೆ. ಇದಕ್ಕೆ ಕಾರಣ ಸಂಘ ರಚನೆಯಾಗಿದ್ದು. ಈ ಸಂಘ ರಚನೆಯಾಗಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಮ್ಮಲ್ಲಿ ಬೆಳೆಯುವ ಐದಾರು ಬಗೆಯ ಹಲಸಿನ ತಳಿಗಳನ್ನು ಗುರುತಿಸಿದ್ದು. ಆ ಮೂಲಕ ನಾವು ಈ ಹಣ್ಣುಗಳಿಗೆ ಮಾರುಕಟ್ಟೆ ಒದಗಿಸಲು ಸಾಧ್ಯವಾಯಿತು.

2008-09ನೆ ಸಾಲಿನಲ್ಲಿ ವಾರ್ಷಿ ಈ ಹಣ್ಣುಗಳ ಮಾರುಕಟ್ಟೆ ವಹಿವಾಟು ಸುಮಾರು 4 ಲಕ್ಷ ರೂ.ಗಳಾಗಿದ್ದು, ಅದೀಗ 28 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ ಎಂದು ರವಿಕುಮಾರ್ ಸಂತಸ ವ್ಯಕ್ತಪಡಿಸುತ್ತಾರೆ. ಮಂಗಳೂರಿನ ಜನರು ಈ ಹಣ್ಣನ್ನು ವಿಶೇಷವಾಗಿ ಇಷ್ಟಪಡುತ್ತಾರೆ. ಅಲ್ಲಿಂದ ಇಲ್ಲಿಗೆ ಹಣ್ಣುಗಳನ್ನು ತರಲು ಸಾರಿಗೆ ವೆಚ್ಚವೇ ದುಬಾರಿಯಾಗುತ್ತದೆ. ಆದರೆ ಮಂಗಳೂರಿಗರು ತೋರಿಸಿರುವ ವಿಶ್ವಾಸದ ಮೇಲೆಯೇ ನಾವು ಪ್ರತಿ ವರ್ಷ ಇಂತಹ ಪ್ರದರ್ಶನಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಿದೆ ಎಂದು ಅವರು ಮಂಗಳೂರಿನ ಗ್ರಾಹಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಹಲಸಿನ ಜ್ಯೂಸ್, ಶೀರಾ, ಹಲ್ವಾ!

ಕಾರ್ಕಳ ಸಾಣೂರಿನ ಅನಂತ ಭಟ್‌ರ ಮಳಿಗೆಯಲ್ಲಿ ಹಲಸಿನ ಜ್ಯೂಸ್, ಶೀರಾ, ಹಲ್ವಾ, ಗಟ್ಟಿಯ ಜತೆಗೆ ಸುಮಾರು 20ಕ್ಕೂ ಅಧಿಕ ಬಗೆಯ ಹಲಸಿನ ವೈವಿಧ್ಯಮಯ ಖಾದ್ಯಗಳು ಲಭ್ಯ. ಹಲಸಿನ ಬೀಜದ ಹಪ್ಪಳ, ಅಂಬಡೆ, ಬೇಯಿಸಿ ಒಣಗಿಸಿ ಪುಡಿ ಮಾಡಿದ ಬೀಜದಿಂದ ತಯಾರಿಸಿದ ಲಾಡು, ಬರ್ಫಿಯನ್ನೂ ಇವರು ತಯಾರಿಸಿ ಮಾರಾಟ ಮಾಡುತ್ತಾರೆ.

ರೋಗ ನಿರೋಧಕ ಶಕ್ತಿಯಿಂದ ಕೂಡಿದ ಬಿದಿರಕ್ಕಿ
ಬಿದಿರು ಗಿಡಗಳಲ್ಲಿ 60 ವರ್ಷಗಳಿಗೊಮ್ಮೆ ಹೂ ಬಿಟ್ಟು ಸಿಗುವ ಅಕ್ಕಿ ರಾಜನ್ (ಬಿದಿರಕ್ಕಿ) ಅಕ್ಕಿ ರೋಗ ನಿರೋಧಕ ಶಕ್ತಿಗಳಿಂದ ಕೂಡಿದೆ ಎನ್ನುತ್ತಾರೆ ಕೆ.ಪಿ. ಭಟ್. 100 ಗ್ರಾಂ ಬಿದಿರಕ್ಕಿಯಲ್ಲಿ 60 ಗ್ರಾಂ ಕಾಬ್ರೋಹೈಡ್ರೇಟ್, 256 ಕಿಲೋ ಕ್ಯಾಲರಿ ಹಾಗೂ 0 ಕೊಬ್ಬಿನಾಂಶವಿರುತ್ತದೆ. ಮಧುಮೇಹ, ಗಂಟುನೋವು ಹಾಗೂ ಕೊಲೆಸ್ಟ್ರಾಲ್‌ಗೆ ಇದು ಪರಿಣಾಮಕಾರಿ ಎನ್ನುವುದು ಅವರ ವಾದ. ಈ ಅಕ್ಕಿಯನ್ನು ಸಾಮಾನ್ಯ ಆಹಾರದ ಜತೆಯು ಅಥವಾ ಪ್ರತ್ಯೇಕವಾಗಿಯೂ ಸೇವಿಸಬಹುದು. ಅಥವಾ ಇದರ ಹುಡಿಯನ್ನು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಬಿದಿರಕ್ಕಿಯಿಂದ ಬೆಲ ಸೇರಿಸಿ ಲಾಡು ಕೂಡಾ ತಯಾರಿಸಲಾಗುತ್ತಿದ್ದು, ಅದನ್ನೂ ಸವಿಯಬಹುದು. ಕಿಲೋ ಒಂದಕ್ಕೆ 600 ರೂ. ದರದಲ್ಲಿ ಈ ಅಕ್ಕಿ ಮಾರಾಟವಾಗುತ್ತದೆ. ಬಹುತೇಕವಾಗಿ ಕಾಡುಗಳಲ್ಲಿ ಬುಡಕಟ್ಟು ಜನಾಂಗದವರೇ ಈ ಅಕ್ಕಿಯನ್ನು ಸಂಗ್ರಹಿಸಿ ಮಾರುಕಟ್ಟೆಗೆ ಒದಗಿಸುತ್ತಾರೆ. ಉಳಿದಂತೆ ವಸಂತೋತ್ಸವದಲ್ಲಿ ಹಲಸು, ಮಾವಿನ ವಿವಿಧ ಉತ್ಪನ್ನಗಳ ಜತೆಗೆ ಗೃಹಪಯೋಗಿ ವಸ್ತುಗಳ ಮಳಿಗೆಗಳೂ ಲಭ್ಯವಿದೆ.

ಹಣ್ಣು ಹಂಪಲು, ತರಕಾರಿ, ಧಾನ್ಯಗಳ ಪ್ರದರ್ಶನ

ಪಿಲಿಕುಳ ನಿಸರ್ಗಧಾಮದ ವತಿಯಿಂದ ಕಾಡು ಹಣ್ಣುಗಳು ಸೇರಿದಂತೆ ವಿವಿದ ಹಣ್ಣು, ತರಕಾರಿ ಹಾಗೂ ಧಾನ್ಯಗಳ ಬಗ್ಗೆ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜತೆ ಪಿಲಿಕುಳದ ಕರಕುಶಲ ಗ್ರಾಮದಲ್ಲಿ ತಯಾರಾದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಾಪುಳಿ, ಡ್ಯೂರಿಯನ್, ಪಿಜೆಕಾಯಿ, ಕಾಪಿರ್, ಮ್ಯಾಂಗೊಸ್ಟಿನ್, ಜಬೋಟಿಕ, ಬರಬಾ, ಅಂಕೋಲೆ, ಪುಲ್ಲಾಸನ್, ವೆಲ್‌ವೆಟ್ ಆ್ಯಪಲ್, ಫ್ಯಾಶನ್ ಪ್ರೂಟ್, ಜಾರಿಗೆ ಹಣ್ಣು, ಎಗ್ ಫ್ರೂಟ್, ಕಾನಕಲ್ಲಟ, ಜಾರಿಗೆ ಕಾಯಿ, ಲಕ್ಷ್ಮಣ ಫಲ, ಮದಕ, ಹೊಳೆತುಮ್ರಿ ಮೊದಲಾದ ಹಣ್ಣು ಹಂಪಲಗಳು ಈ ಪ್ರದರ್ಶನದಲ್ಲಿವೆ.

ಮಾತ್ರವಲ್ಲದೆ, ಮಲ್ಗೋವಾ, ಕಡುಗಾಯಿ ಮಾವು, ತೊಕ್ಕು ಮಾವು, ಜೀರಿಗೆ ಮಾವು, ಗೊಜ್ಜು ಮಾವು, ಕಾಳಪ್ಪಾಡಿ, ಬಾದಶಹ, ಕಾಲಶಾಡ, ಬಂಗಾರ ಅರಸಿನ ಸೇರಿದಂತೆ 38 ಬಗೆಯ ವಿಭಿನ್ನ ತಳಿಯ ಮಾವುಗಳನ್ನೂ ಪ್ರದರ್ಶನದಲ್ಲಿಡಲಾಗಿದೆ.

ಕಾಡುಗಳಲ್ಲಿ ಲಭ್ಯವಿರುವ ಕಾಗೆಮಣಿ, ಮಂಜೊಟ್ಟಿ, ಸಮುದ್ರಫಲ, ನಾಯಿ ಸೊಲಂಗ್, ನಾಣಿಲ್, ಕುದನೆ, ಸೂರಂಟೆ, ದಡ್ಡಲ್, ರಾಮಪತ್ರ, ಕಾಡುಬದನೆ, ಶಾಂತಿಕಾಯಿ, ಕಾವಟೆ ಮೊದಲಾದವುಗಳನ್ನೂ ಪ್ರದರ್ಶನದಲ್ಲಿ ವೀಕ್ಷಿಸಬಹುದು.

ಇಂದಿನಿಂದ ಜೂನ್ 5ರವರೆಗೆ ನಡೆಯಲಿರುವ ವಸಂತೋತ್ಸವಕ್ಕೆ ಮಾಜಿ ಸಚಿವ ಹಾಗೂ ಶಾಸಕ ಅಭಯಚಂದ್ರ ಜೈನ್ ಮಾವಿನ ಹಣ್ಣು ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿ., ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ. ವಿ. ರಾವ್, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X