ಜಿಲ್ಲಾ ಕನ್ನಡ ಜಾನಪದ ಪರಿಷತ್‌ನಿಂದ ಕಲಾವಿದರ ಮಾಹಿತಿ ಸಂಗ್ರಹ
ಚಿಕ್ಕಮಗಳೂರು, ಜೂ.3: ಜಿಲ್ಲೆಯ ಜಾನಪದ ಕಲಾವಿದರು, ಜಾನಪದ ವಿದ್ವಾಂಸರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಕೋಶ ಮತ್ತು ಕೈಪಿಡಿಗಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಶಿಸಿ ಹೋಗುತ್ತಿರುವ ಜಾನಪದ ಕಲೆ ಹಾಗೂ ಜಾನಪದ ಕಲಾವಿದರ ಬಗ್ಗೆ ಕುರಿತು ಕನ್ನಡ ಜಾನಪದ ಪರಿಷತ್, ಜಾನಪದ ಕಲಾವಿದರಿಗೆ ಸರ್ಕಾರಿದಿಂದ ಸಿಗುವ ಮಾಶಾಸನ ಹಾಗೂ ಪ್ರಶಸ್ತಿ ಪುರಸ್ಕಾರಗಳಿಗಾಗಿ ಸರ್ಕಾರದ ಹಾಗೂ ಸಂಘಸಂಸ್ಥೆಗಳ ಗಮನಕ್ಕೆ ತರುವ ಸಲುವಾಗಿ ಈ ಮಾಹಿತಿಕೋಶದ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಜಾನಪದ ಕಲಾವಿದರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಸಂಪೂರ್ಣ ವಿವರವನ್ನು ಕನ್ನಡ ಜಾನಪದ ಪರಿಷತ್ ಮುದ್ರಿಸಿದ ಅರ್ಜಿ ನಮೂನೆಯಲ್ಲಿ ಈ ಕೆಳಕಂಡ ತಾಲ್ಲೂಕು ಅಧ್ಯಕ್ಷರ ಬಳಿ ಸಲ್ಲಿಸಲು ಕೋರಲಾಗಿದೆ.
ಚಿಕ್ಕಮಗಳೂರು ತಾಲೂಕು ಕಜಾಪ ಅಧ್ಯಕ್ಷ ಸುಮಂತ್ ಕುಮಾರ್, ಕಡೂರು ತಾಲ್ಲೂಕು ಕಜಾಪ ಅಧ್ಯಕ್ಷ ಕುಪ್ಪಾಳು ಶಾಂತಮೂರ್ತಿ, ತರೀಕೆರೆ ತಾಲ್ಲೂಕು ಕಜಾಪ ಅಧ್ಯಕ್ಷ ಎ.ಸಿ. ಚಂದ್ರಪ್ಪ, ಕೊಪ್ಪ ತಾಲ್ಲೂಕು ಕಜಾಪ ಅಧ್ಯಕ್ಷ ಜಾಲ್ಮರ ಸುಬ್ಬರಾವ್, ಮೂಡಿಗೆರೆ ತಾಲ್ಲೂಕು ಕಜಾಪ ಅಧ್ಯಕ್ಷ ಮಂಜುನಾಥ್ ಭಕ್ಕಿ, ಶೃಂಗೇರಿ ತಾಲ್ಲೂಕು ಕಜಾಪ ಅಧ್ಯಕ್ಷ ಪೂರ್ಣೇಶ್‌ನಾಯ್ಕ, ನರಸಿಂಹರಾಜಪುರ ತಾಲ್ಲೂಕು ಕಜಾಪ ಅಧ್ಯಕ್ಷ ಎಂ.ಮಹೇಶ್ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸೂರಿ ಶ್ರಿನಿವಾಸ್, ಅಧ್ಯಕ್ಷರು, ಜಿಲ್ಲಾ ಕನ್ನಡ ಜಾನಪದ ಪರಿಷತ್ ಮೊ. 9449315663 ಸಂಪರ್ಕಿಸಬಹುದಾಗಿದೆ.







