ವೈದ್ಯಕೀಯ ಕ್ಷೇತ್ರದಲ್ಲಿ ನರ್ಸಿಂಗ್ ವಿಭಾಗವೂ ಪ್ರಮುಖ ಕ್ಷೇತ್ರವಾಗಿದೆ: ಡಾ.ಬಿ.ವಿ. ಕಾತ್ಯಾಯಿನಿ
ಮಂಗಳೂರು, ಜೂ.3: ವೈದ್ಯಕೀಯ ಕ್ಷೇತ್ರದಲ್ಲಿ ನರ್ಸಿಂಗ್ ವಿಭಾಗವೂ ಪ್ರಮುಖ ಕ್ಷೇತ್ರವಾಗಿದ್ದು ಇಲ್ಲಿ ವೈಜ್ಞಾನಿಕವಾಗಿ ಮತ್ತು ಗುಣಮಟ್ಟದ ಸೇವೆಯ ಕೊರತೆಯಾಗಬಾರದು ಎಂದು ನಿಮ್ಹಾನ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ವಿ. ಕಾತ್ಯಾಯಿನಿ ತಿಳಿಸಿದ್ದಾರೆ.
ನಗರದ ಫಾದರ್ ಮುಲ್ಲಾರ್ ನರ್ಸಿಂಗ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಆಧುನಿಕ ವೈದ್ಯಕೀಯ ಕ್ಷೆತ್ರದಲ್ಲಿ ಸಾಕಷ್ಟು ವೈಜ್ಞಾನಿಕ ಉಪಕರಣಗಳು ಲಭ್ಯವಿದೆ.ಈ ಉಪಕರಣಗಳನ್ನು ಬಳಸಿಕೊಂಡು ನರ್ಸಿಂಗ್ ವಿಭಾಗದಲ್ಲಿ ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯವಿದೆ.
ವೈದ್ಯಕೀಯ ರಂಗದಲ್ಲಿ ನರ್ಸಿಂಗ್ ವಿಭಾಗದ ಸೇವೆ ಹೆಚ್ಚು ಬೆಳಕಿಗೆ ಬಾರದೆ ತೆರೆ ಮರೆಯಲ್ಲಿದೆ. ಆದರೆ ಈ ವಿಭಾಗವು ಇತರ ವಿಭಾಗಗಳಷ್ಟೇ ಪ್ರಮುಖ ಇಲಾಖೆಯಾಗಿದೆ ಎಂದು ಕಾತ್ಯಾಯಿನಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲಾರ್ ಚ್ಯಾರಿಟೇಬಲ್ ಇನ್ಸ್‌ಟ್ಯೂಟ್‌ನ ನಿರ್ದೇಶಕ ವಂ.ರಿಚರ್ಡ್ ಕುವೆಲ್ಲೋ ಮಾತನಾಡುತ್ತಾ, ವೈದ್ಯಕೀಯ ರಂಗದಲ್ಲಿ ವೃತ್ತಿಪರತೆ ಪರತೆ ಮುಖ್ಯ ನರ್ಸಿಂಗ್ ಕ್ಷೇತ್ರದಲ್ಲಿ ವೃತ್ತಿಪರತೆಯೊಂದಿಗೆ ಹೆಚ್ಚಿನ ಮಾನವೀಯ ಕಾಳಜಿಯನ್ನು ಒಳಗೊಂಡು ಕಾರ್ಯನಿರ್ವಹಿಸಬೇಕಾಗಿದೆ. ಇದರಿಂದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಇತರ ಸೇವೆಗಳನ್ನು ಉತ್ತಮ ರೀತಿಯಲ್ಲಿ ನೀಡಲು ಸಾಧ್ಯ. ನರ್ಸಿಂಗ್ ವಿಭಾಗ ವೈದ್ಯಕೀಯ ಕ್ಷೇತ್ರದಲ್ಲಿ ನಿರ್ಲಕ್ಷಿತ ಕ್ಷೇತ್ರವಾಗಿಲ್ಲ. ಅದು ಮಹತ್ವದ ಸೇವೆಯನ್ನು ನೀಡುವ ವಿಭಾಗವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಫಾದರ್ ಮುಲ್ಲಾರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜೆಸಿಂತ ಡಿ ಸೋಜ, ಕಾರ್ಯಕ್ರಮ ಸಂಗಘಟಕರಾದ ಶಾಜಿ.ಪಿ.ಜೆ ಸ್ವಾಗತಿಸಿದರು.
ಪ್ರಣೀತ ಡಿ ಸೋಜ ವಂದಿಸಿದರು. ಫಾ.ಮುಲ್ಲಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ, ಫಾ.ಮುಲ್ಲಾರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಜಿತ್ ಮಿನೇಜಸ್, ಡೀನ್ ಡಾ.ಜಯಪ್ರಕಾಶ್ ಆಳ್ವಾ, ವೈದ್ಯಕೀಯ ಸೇವಾ ವಿಭಾಗದ ಮುಖ್ಯಸ್ಥ ಡಾ.ಬಿ.ಸಂಜೀವ ರೈ ಮೊದಲಾದವರು ಉಪಸ್ಥಿತರಿದ್ದರು.







