ಆರೆಸ್ಸೆಸ್ ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಅರುಣನ್‌ಗೆ ಸಿಪಿಎಂನಿಂದ ಎಚ್ಚರಿಕೆ

ತೃಶೂರ್,ಜೂ. 3: ಆರೆಸ್ಸೆಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇರಿಂಙಲಕ್ಕೂಡ್ ಶಾಸಕ ಪ್ರೊ.ಕೆ.ಯು. ಅರುಣನ್‌ರಿಗೆ ಸಿಪಿಎಂ ಜಿಲ್ಲಾ ಸೆಕ್ರಟರಿಯೇಟ್ ಸಭೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಲು ನಿರ್ಧರಿಸಲಾಗಿದೆ. ಘಟನೆಗೆ ಸಂಬಂಧಿಸಿ ಶಾಸಕ ನೀಡಿದ ವಿವರಣೆ ತೃಪ್ತಿಕರವಲ್ಲ ಎಂದು ಸೆಕ್ರಟರಿಯೇಟ್ ಹೇಳಿದೆ.
ಕಳೆದ ದಿನ ಸಿಪಿಎಂ ರಾಜ್ಯಸಮಿತಿ ಸಭೆಯಲ್ಲಿ ಅರಣನ್ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮವನ್ನು ನಿರ್ಧರಿಸಲು ಜಿಲ್ಲಾ ಸಮಿತಿ ಸಭೆ ಸೇರಬೇಕೆಂದು ಸೂಚಿಸಲಾಗಿತ್ತು. ಘಟನೆಯಲ್ಲಿ ಅರುಣನ್‌ರನ್ನು ತಪ್ಪದಾರಿಗೆಳೆದದ್ದು ದೃಢವಾಗಿದೆ. ಆದ್ದರಿಂದಇನ್ನುಮುಂದೆ ಎಚ್ಚರಿಕೆ ಪಾಲಿಸಬೇಕೆಂದು ಜಿಲ್ಲಾ ಸಮಿತಿ ಸೂಚಿಸಿದೆ.
Next Story





