ಶೃಂಗೇರಿ ರಸ್ತೆಗೆ ವಿಶೇಷ ಅನುದಾನ: ಅನಂತ ಕುಮಾರ್

ಮೂಡಿಗೆರೆ, ಜೂ.3: ಹೊರನಾಡು-ಬಲಿಗೆ-ಮೆಣಸಿನ ಹಾಡ್ಯ- ಶೃಂಗೇರಿ ರಸ್ತೆಗೆ ತಮ್ಮ ವಿಶೇಷ ಅನುದಾನದಲ್ಲಿ ಹಣ ಬಿಡುಗಡೆ ಮಾಡಿಸುವ ಮೂಲಕ ರಸ್ತೆ ಅಭಿವೃದ್ದಿ ಪಡಿಸುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಭರವಸೆ ನೀಡಿದರು.
ಅವರು ಶನಿವಾರ ಹೊರನಾಡು ದೇವಸ್ಥಾನಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊರನಾಡು ಆಧಿಶಕ್ತ್ಯಾತ್ಮಕ ಅನ್ನಪೂರ್ಣೆಶ್ವರಿ ಅಮ್ಮನವರ ಕ್ಷೇತ್ರ ದೇಶದಲ್ಲಿ ಬಹಳ ಪ್ರಸಿದ್ದಿ ಪಡೆದಿದೆ. ಶ್ರೀ ಕ್ಷೇತ್ರದ ಧರ್ಮಕರ್ತರು ರಾಜ್ಯ ಹೊರ ರಾಜ್ಯಗಳ ಶಾಲೆಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಟ್ಟೆ, ಲೋಟ, ಪುಸ್ತಕ ಹಾಗೂ ಗ್ರಾಮೀಣ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ ಎಂದರು.
ಭಕ್ತರಿಂದ ಬಂದಂತಹ ಹಣವನ್ನು ಭಕ್ತರ ಏಳಿಗೆಗಾಗಿ ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂರ್ಥದಲ್ಲಿ ಶ್ರಮಿಸುತ್ತಿರುವ ಧರ್ಮಕರ್ತ ಡಾ/ಜಿ.ಭೀಮೇಶ್ವರ ಜೋಷಿ ಅವರ ಸೇವೆ ಅಮೋಘವಾಗಿದ್ದು. ಸರ್ಕಾರಗಳಿಂದ ಯಾವುದೇ ಫಲಾಪೇಕ್ಷೆಯನ್ನು ಬಯಸದೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಧರ್ಮಕರ್ತ ಡಾ/ಜಿ.ಭೀಮೇಶ್ವರ ಜೋಷಿ ಸಚಿವ ಅನಂತಕುಮಾರ್ ಅವರ ಗಮನ ಸೆಳೆದು ಮಾತನಾಡಿ, ಶ್ರೀಕ್ಷೇತ್ರಕ್ಕೆ ರಾಜ್ಯ ಮತ್ತು ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ. ಶೃಂಗೇರಿಗೆ ಬಂದವರು ಅನ್ನಪೂರ್ಣೆಶ್ವರಿಯನ್ನು ನೋಡಿ ಹೋಗುತ್ತಾರೆ. ಇನ್ನು ಕೆಲವು ಭಕ್ತರು ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದು ಹೊರನಾಡಿಗೆ ಆಗಮಿಸಿ ತಾಯಿಯ ದರ್ಶನ ಪಡೆದು ನಂತರ ಶೃಂಗೇರಿಗೆ ಆಗಮಿಸುತ್ತಾರೆ.
ಶೃಂಗೇರಿಗೆ ಬಂದು ಹೋಗುವ ಭಕ್ತಾಧಿಗಳುಸುತ್ತಿ ಬಳಸಿ ಹೋಗಬೇಕಾಗಿದೆ. ಭಕ್ತರ ಅನುಕೂಲಕ್ಕಾಗಿ ಹೊರನಾಡು-ಬಲಿಗೆ-ಶೃಂಗೇರಿ ರಸ್ತೆ ಕೇವಲ 42 ಕಿ.ಮೀ.ಆಗಲಿದ್ದು,ಸಮಯ ಮತ್ತು ಹಣ ಉಳಿತಾಯವಾಗುತ್ತದೆ.ಬಲಿಗೆ ಮತ್ತು ಮೆಣಸಿನ ಹಾಡ್ಯದ ಗ್ರಾಮದ ಜನರಿಗೆ ಓಡಾಡಲು ಅನುಕೂಲವಾಗುತ್ತದೆ ಎಂದು ಗಮನ ಸೆಳೆದರು.
ಈ ಸಂಧರ್ಭದಲ್ಲಿ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್, ಕಾರ್ಕಳದ ಶಾಸಕ ಸುನೀಲ್ ಕುಮಾರ್, ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ಜಿ.ರಾಮನಾರಾ ಯಣ ಜೋಷಿ ಉಪಸ್ಥಿತರಿದ್ದರು.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>







