ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ
ಮಂಗಳೂರು, ಜೂ.3: ಮೂಡುಬಿದಿರೆ ಪುತ್ತಿಗೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ 10ನೆ ತರಗತಿಯ ಸಿಪಿಎಸ್‌ಇ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ 7 ಮಂದಿ ತಲಾ 10 ಸಿಜಿಪಿಎ ಅಂಕಗಳನ್ನು ಪಡೆದಿದ್ದಾರೆ.
ಹಫೀಝ್ ಫೌಝಾನ್ ಮುಹಮ್ಮದ್ ಶಾಫಿ, ಅಬ್ದುಲ್ ಸತ್ತಾರ್, ಸಿರಾಜ್ ಅಹ್ಮದ್, ಅಯಿಷಾ ಶೈಮಾ, ಬೀಬಿ ಮರಿಯಮ್ಮ ಶಮಾ, ಸಲ್ವಾ ಫಾತಿಮಾ ಝೊಹ್ರಾ ಮತ್ತು ಝೈನಾಬ್ ಅಬ್ದುರ್ರವೂಫ್ 10 ಸಿಜಿಪಿಎ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು.
ಮೂವರು ವಿದ್ಯಾರ್ಥಿಗಳು 9.8 ಸಿಜಿಪಿಎ, 4 ಮಂದಿ 9.6 ಸಿಜಿಪಿಎ, 15 ಮಂದಿ 9 ಮತ್ತು ಮೇಲ್ಪಟ್ಟು ಸಿಜಿಪಿಎ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯು.ಎಂ. ಮೊಯ್ದಿನ್ ಕುಂಞಿ ಮತ್ತು ಅಲ್‌ಫುರ್ಖಾನ್ ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Next Story





