ಅರಬ್ಬೀ ಸಮುದ್ರದ ನಡುವಿನ ಬಂಡೆಗೆ ಢಿಕ್ಕಿ ಹೊಡೆದ ಬಾರ್ಜಿ: 4 ಮಂದಿಯ ರಕ್ಷಣೆ

ಮಂಗಳೂರು, ಜೂ.3: ಬ್ರೇಕ್ ವಾಟರ್ ಕಾಮಗಾರಿಯ ಬಾರ್ಜಿಯೊಂದು ಅರಬ್ಬೀ ಸಮುದ್ರದ ನಡುವಿನ ಬಂಡೆಗೆ ಢಿಕ್ಕಿ ಹೊಡೆದ ಪರಿಣಾಮ ಅಪಾಯದಲ್ಲಿ ಸಿಲುಕಿದ್ದ 33 ನೌಕರರ ಪೈಕಿ 4 ಮಂದಿಯನ್ನು ರಕ್ಷಿಸಲಾಗಿದೆ.
ಉಳ್ಳಾಲ ಮೊಗವೀರಪಟ್ಣದಲ್ಲಿ ಘಟನೆ ನಡೆದಿದ್ದು, ಬಾರ್ಜಿಗೆ ಭಾಗಶ: ಹಾನಿಯಾಗಿದ್ದು, ಮುಳುಗಡೆಯ ಭೀತಿ ಎದುರಾಗಿದೆ. ಬಾರ್ಜಿಯಲ್ಲಿ ಸುಮಾರು 33 ನೌಕರರು ಸಿಲುಕಿದ್ದರು. ತಕ್ಷಣವೇ ಸಣ್ಣ ಬೋಟಿನ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, 4 ಮಂದಿಯನ್ನು ರಕ್ಷಿಸಲಾಗಿದೆ.
Next Story





