ಜೂ. 9: ಕೆಸಿಎಫ್ ರಿಯಾದ್ ಝೋನಲ್ ವತಿಯಿಂದ ಇಫ್ತಾರ್ ಕೂಟ

ರಿಯಾದ್, ಜೂ.3: ಪವಿತ್ರ ರಮಝಾನ್ ತಿಂಗಳ ದ್ವಿತೀಯ ಶುಕ್ರವಾರ, ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ವತಿಯಿಂದ ನಡೆಯಲಿರುವ ಬೃಹತ್ ಇಫ್ತಾರ್ ಕೂಟದ ಆಮಂತ್ರಣ ಪತ್ರವನ್ನು ಇತ್ತೀಚೆಗೆ ಇಲ್ಲಿನ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಸುಮಾರು ಒಂದು ಸಾವಿರ ಮಂದಿಗೆ ಪಾಲ್ಗೊಳ್ಳಲು ಅನುಗುಣವಾಗುವಂತೆ ಏರ್ಪಡಿಸಲಾಗುವ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರಿಗೆ ಒಟ್ಟಾಗಿ ಸೇರುವ ಅವಕಾಶ ಕಲ್ಪಿಸಲಾಗಿದೆ.
ಜೂನ್ 9 ರಂದು ಸಂಜೆ ಐದು ಗಂಟೆಗೆ ಆರಂಭವಾಗುವ ಕಾರ್ಯಕ್ರಮವು ರಾತ್ರಿ 10 ಗಂಟೆಯ ತನಕ ಮುಂದುವರಿಯಲಿದ್ದು ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮಜ್ಲಿಸ್, ರಮಝಾನ್ ಸಂದೇಶ ಭಾಷಣ, ಕೆಸಿಎಫ್ ಇಹ್ಸಾನ್ ಚಟುವಟಿಕೆಗಳ ಪ್ರದರ್ಶನ, " ಗಲ್ಫ್ ಇಶಾರಾ" ಕೌಂಟರ್ , ತರಾವೀಹ್ ನಮಾಝ್ ಇತ್ಯಾದಿಗಳನ್ನು ಹಮ್ಮಿಕ್ಕೊಳ್ಳಲಾಗಿದೆ.
ಈ ಕುರಿತಂತೆ ತಯಾರಿಸಲಾದ ಆಮಂತ್ರಣ ಪತ್ರವನ್ನು ಕೆಸಿಎಫ್ ಝೋನಲ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸದಸ್ಯ ನಝೀರ್ ಕಾಶಿಪಟ್ಣ ರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಶೀರ್ ತಲಪಾಡಿ, ಕೋಶಾಧಿಕಾರಿ ಇಸ್ಮಾಯಿಲ್ ಕಣ್ಣಂಗಾರ್ ಹಾಗೂ ಸಂಘಟನೆಯ ಇತರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಹಂಝ ಮೈಂದಾಳ ಹಾಗೂ ಕಾರ್ಯದರ್ಶಿಯಾಗಿ ಝಾಹಿರ್ ಅಬ್ಬಾಸ್ ಉಳ್ಳಾಲ್ ಆಯ್ಕೆಗೊಂಡಿಗೊಂದ್ದಾರೆ.
ಉಳಿದಂತೆ ಇತರ ಉಪ ಸಮಿತಿಗಳಿಗೆ ಫಾರೂಕ್ ಅಬ್ಬಾಸ್ ಉಳ್ಳಾಲ್ (ವ್ಯವಸ್ಥಾಪಕ) ಇಸ್ಮಾಯಿಲ್ ಜೋಗಿಬೆಟ್ಟು (ಆರ್ಥಿಕ ವ್ಯವಹಾರ) ಯೂಸುಫ್ ಕಳಂಜಿಬೈಲ್ (ಸಂಚಾರ - ಸಾಗಣೆ) ಮುಸ್ತಫಾ ಸ ಅದಿ, ನಿಝಾಮ್ ಸಾಗರ್ (ಇಶಾರಾ) ಅನ್ಸಾರ್ ಉಳ್ಳಾಲ್ (ವೇದಿಕೆ) ಹನೀಫ್ ಕಣ್ಣೂರು, ಅಬ್ದುರ್ರಹ್ಮಾನ್ ಜೋಗಿಬೆಟ್ಟು (ಸ್ವಯಂ ಸೇವಕರು) ನಝೀರ್ ಕಾಶಿಪಟ್ಣ, ಇಸ್ಮಾಯಿಲ್ ಕಣ್ಣಂಗಾರ್ (ಅಥಿತಿ ಸ್ವೀಕಾರ) ಸಿದ್ದೀಕ್ ಸಖಾಫಿ ಪೆರುವಾಯಿ, ರಶೀದ್ ಮದನಿ ಉರುವಾಲು ಪದವು (ಆಧ್ಯಾತ್ಮಿಕ ಮಜ್ಲಿಸ್) ಹಾಗೂ 17 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.







