ಕಾಸರಗೋಡು: ಮಳೆಗಾಲದ ಆರಂಭದಲ್ಲೇ ಹೊಂಡಮಯವಾದ ರಸ್ತೆಗಳು
.jpg)
ಕಾಸರಗೋಡು, ಜೂ. 3: ಮಳೆಗಾಲ ಆರಂಭವಾದೊಡನೆ ಜಿಲ್ಲೆಯ ಗ್ರಾಮೀಣ ರಸ್ತೆಗಳು ಹಳ್ಳಗಳಾಗಿ ರೂಪುಗೊಳ್ಳತೊ ಡಗಿದೆ. ಇದರಿಂದ ಸಂಚಾರವೇ ದುಸ್ತರವಾಗತೊಡಗಿದೆ. ಜಿಲ್ಲೆಯ ಬಹುತೇಕ ರಸ್ತೆಗಳು ಹೊಂಡ ಮಾಯವಾಗಿದ್ದು , ಹೊಂಡದಲ್ಲಿ ರಸ್ತೆಯನ್ನು ಹುಡುಕಿಕೊಂಡು ಸಂಚರಿಸಬೇಕಾದ ಸ್ಥಿತಿ ತಲೆದೋರುತ್ತಿದೆ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ.
ಪೆರ್ಮುದೆ - ಕನಿಯಾಲ, ಪೈವಳಿಕೆ - ಚೇವಾರು, ಜೋಡುಕಲ್ಲು - ಕಯ್ಯಾರು , ಬಾಯಾರು ಕನಿಯಾಲ - ಸುದೆಂಬಲ ಮೊದಲಾದ ರಸ್ತೆಗಳು ಮೊದಲ ಮಳೆಗೆ ಹೊಂಡ ಮಯವಾಗಿದೆ.
ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ಪಾದಚಾರಿಗಳು ಅನುಭವಿಸುವ ಸಮಸ್ಯೆ ಒಂದೆರಡಲ್ಲ..
ಮಳೆಗಾಲದ ಮೊದಲು ರಸ್ತೆ ಬದಿ ಮೋರಿ ಅಥವಾ ಚರಂಡಿ ದುರಸ್ತಿಯಾಗುತ್ತಿಲ್ಲ, ಕಾಲ ಕಾಲಕ್ಕೆ ದುರಸ್ತಿ ಮಾಡದೆ ಇರುವುದು ರಸ್ತೆಯ ಗುಣಮಟ್ಟಕ್ಕೆ ಧಕ್ಕೆಯಾಗಿದೆ. ಪ್ರತಿ ಮಳೆಗಾಲ ಗಾಳದಲ್ಲೂ ಜಿಲ್ಲೆಯ ಒಳ ರಸ್ತೆಗಳ ದುರಸ್ತಿಗೆ ಹಲವು ಕೋಟಿ ರೂ.ಗಳನ್ನು ಸರಕಾರವು ನೀಡುತ್ತದೆ. ಮಳೆಗಾಲದ ಪೂರ್ವದಲ್ಲಿ ಆಗಬೇಕಾದ ಇಂತಹ ಅತೀ ಅಗತ್ಯ ದುರಸ್ತಿ ಕಾರ್ಯಗಳು ಎಂದರು.
ಲೊಕೋಪಯೋಗಿ ಇಲಾಖೆಯು ಈ ಬಾರಿ ರಸ್ತೆ ಅಭಿವೃದ್ಧಿಗೆ ಹಲವು ಕೋಟಿ ರೂ. ಗಳನ್ನು ನಿಗದಿಪಡಿಸಿದ್ದರೂ ಈ ತನಕ ಯಾವುದೇ ಅಭಿವೃದ್ಧಿ ಕಾಮಗಾರಿಯ ಕುರುಹು ಕಾಣುತ್ತಿಲ್ಲ. ಜನಪ್ರತಿನಿಧಿಗಳಂತೂ ರಸ್ತೆಯ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿಲ್ಲ . ಹಲವು ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕಕರು, ದಿನಗೂಲಿ ಕಾರ್ಮಿಕರು ಈ ರಸ್ತೆಯಾಗಿ ಸಂಚರಿಸುತ್ತಾರೆ, ಬಸ್ಸು ಸೌಕರ್ಯ ವಿಲ್ಲದಿರುವುದರಿಂದ ವಿದ್ಯಾರ್ಥಿಗಳು ಹಲವು ಕಿ.ಮೀ ದೂರ ನಡೆದು ನಡೆದು ಶಾಲೆಗಳಿಗೆ ತೆರಳಬೇಕಿದೆ ಎಂದರು.





