ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಹೃದಯಾಘಾತದಿಂದ ಸಾವು
ಮಡಿಕೇರಿ ಜೂ.3 :ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯೊಬ್ಬರು ಹೃದಯಾಘಾತದಿಂದ ಜಿಲ್ಲಾ ಕಾರಾಗೃಹದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದಡಿ ಬಂಧಿಯಾಗಿದ್ದ ಜಿ.ಟಿ.ಜಗ ಎಂಬುವವರೆ ಮೃತ ವ್ಯಕ್ತಿಯಾಗಿದ್ದಾರೆ. ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇಲ್ಲಿನ ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೆಲವು ದಿನಗಳ ಹಿಂದೆಯಷ್ಟೆ ಕುಶಾಲನಗರ ಸಮೀಪದ ಗೊಂದಿಬಸವನ ಹಳ್ಳಿ ನಿವಾಸಿ ಜಿ.ಟಿ.ಜಾನ್ಸನ್ ಅಲಿಯಾಸ್ ಜಾನಿ ಹಾಗೂ ಆತನ ಸಹೋದರ ಜಿ.ಟಿ.ಜಗನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತ್ತು.
Next Story





