ಕೊಡವ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
ಮಡಿಕೇರಿ ಜೂ.3 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ 2015-16 ಮತ್ತು 2016-17ನೇ ಸಾಲಿನಲ್ಲಿ 9 ಜನರಿಗೆ ಜಾನಪದ ಗೌರವ ಪ್ರಶಸ್ತಿ ಹಾಗೂ 2015-16ನೇ ಸಾಲಿನ ಪುಸ್ತಕ ವಿಭಾಗದ 5 ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಗೌರವ ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಪುಸ್ತಕ ವಿಭಾಗದ ಪ್ರಶಸ್ತಿ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.ಪ್ರಸಕ್ತ ಸಾಲಿನ ಫೆಲೋಶಿಪ್‌ಗೆ ನಾಲ್ಕು ಮಂದಿ ಆಯ್ಕೆಯಾಗಿರುವುದಾಗಿ ತಿಳಿಸಿದರು.
ಅಕಾಡೆಮಿಯ ಗೌರವ ಪ್ರಶಸ್ತಿಗಳಿಗೆ ಮೈತಾಡಿಯ ಬಾಳೆಕುಟ್ಟಿರ ಈರಪ್ಪ (ಬಾಳೋಪಾಟ್ ಹಾಡುಗಾರ ಮತ್ತು ಜಾನಪದ ಕಲೆ), ಮೂರ್ನಾಡಿನ ಚೌರೀರ ತಿಮ್ಮಯ್ಯ(ಬಾಬು) (ಜಾನಪದ ತಜ್ಞ, ಕ್ರೀಡೆ, ಹಾಡುಗಾರಿಕೆ), ತೋರ ಗ್ರಾಮದ ಕುಡಿಯರ ದೇವಕ್ಕಿ (ಊರ್‌ಟಿಕೊಟ್ಟ್ ಜಾನಪದ ಹಾಡು), ಹಾಲುಗುಂದ ಗ್ರಾಮದ ಪುಗ್ಗೇರ ಕೆ.ಪೂವಮ್ಮ (ಕೊಡವ ಜಾನಪದ ನೃತ್ಯ ಉಮ್ಮತ್ತಾಟ್), ಪೊನ್ನಂಪೇಟೆಯ ಕುಟ್ಟಂಡ ರಾಜಾರಾಮ್ (ಸಂಗೀತ ವಾದ್ಯ), ಕೆದಮುಳ್ಳೂರು ಬೀಕಚಂಡ ಎಂ.ಬಿದ್ದಪ್ಪ (ವಿವಿಧ ಬಗೆಯ ತೆರೆ ಕಟ್ಟುವವರು ಮತ್ತು ಜಾನಪದ ಕಲೆಗಾರ), ಕಕ್ಕಬ್ಬೆ ಕುಂಜಿಲದ ಉತ್ತುಕುಟ್ಟಡ ಸಿ.ತಿಮ್ಮ ಉಪ್ಪಚ್ಚ(ಅಂಗಕಳಿಕಾರ ಮತ್ತು ಕೊಡವ ಒಡ್ಡೋಲಗ ನುಡಿಸುವವರು), ಬಿಟ್ಟಂಗಾಲ ಗ್ರಾಮದ ಪೊನ್ನೀರ ಗಗನ್ (ಪೀಚೆಕತ್ತಿ ತಯಾರಿಸುವವರು ಹಾಗೂ ಉರಗತಜ್ಞ) ಹಾಗೂ ಬಾಡಗರ ಕೇರಿ ಪೊರಾಡು ಗ್ರಾಮದ ಬಲ್ಯಮಿದೇರಿರ ಸಿ.ನಾಣಯ್ಯ(ಜಾನಪದ ಕಲಾವಿದ) ಆಯ್ಕೆಯಾಗಿದ್ದಾರೆ.
ಪುಸ್ತಕ ಪ್ರಶಸ್ತಿಗಳಿಗೆ ಡಾಬೊವ್ವೇರಿಯಂಡ ಚೆಟ್ಟಿಚ್ಚ ಉತ್ತಯ್ಯ ಮತ್ತು ಬೊವ್ವೇರಿಯಂಡ ಉತ್ತಯ್ಯ ತಂಗಮ್ಮನವರು ಬರೆದ 2016ರ ಕೊಡವ ಅರಿವೋಲೆ, ಮೊಣ್ಣಂಡ ಶೋಭ ಸುಬ್ಬಯ್ಯರ 2016ರ ಪವಳಸಾಲ್, ಐತಿಚಂಡ ರಮೇಶ್ ಉತ್ತಪ್ಪ ಅವರ 2015ರ ನಲ್ಲತಕ್ಕ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪನವರ 2015ರ ಪೊಂಬೊಳೆ ನೆಲ್‌ಲ್ ಹಾಗೂ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣನವರ 2015ರ ಪಾರು ಆಯ್ಕೆಯಾಗಿವೆ.
ಅಕಾಡೆಮಿಯ ಫೆಲೋಶಿಪ್‌ನ್ನು ಡಾ.ರೇಖಾ ಚಿಣ್ಣಪ್ಪ ಅವರ ಸ್ವಾತಂತ್ರ್ಯ ಪೂರ್ವ ಕೊಡಗಿನಲ್ಲಿ ರಾಜಕೀಯ ಪರಿವರ್ತನೆ(1947) ವಿಷಯದ ಅಧ್ಯಯನ ಮತ್ತು ದಾಖಲೀಕರಣಕ್ಕೆ, ಹರ್ಷಮಂದಣ್ಣ ಅವರ ಸ್ವಾತಂತ್ರ್ಯೋತ್ತರ ಕೊಡಗಿನಲ್ಲಿ ರಾಜಕೀಯ ಪರಿವರ್ತನೆ(1947-1956), ಸುಜಾತ ಬೋಪಣ್ಣ ಅವರ ಕೊಡಗಿನಲ್ಲಿ ಮಹಿಳೆಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು(ಅಂದು-ಇಂದು), ದೀನಾ ಎಂ.ಪಿ. ಅವರ ಕೊಡಗಿನಲ್ಲಿ ಮುಂದ್ ಮನೆ/ಬಲ್ಯಮನೆ ಇತ್ಯಾದಿಗಳ ದಾಖಲೀಕರಣ (ಮಂದ್, ಅಂಬಲ, ಕೈಮಡ, ದೇವನೆಲೆ)ಕ್ಕೆ ನೀಡಲಾಗಿದೆಯೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರುಗಳಾದ ಕುಡಿಯರ ಬೋಪಯ್ಯ, ಮಾದೇಟಿರ ಬೆಳ್ಯಪ್ಪ, ಲೀಲಾವತಿ, ಅಣ್ಣೀರ ಹರೀಶ್ ಮಾದಪ್ಪ, ಡಾಮೇಚೀರ ಸುಭಾಷ್ ನಾಣಯ್ಯ, ಮುಲ್ಲೇಂಗಡ ಬೇಬಿ ಚೋಂದಮ್ಮ, ಚೌವ್ವಂಡ ಎಸ್.ಬೋಪಯ್ಯ, ಕಳಿಚಂಡ ಜಿ.ಕಾರ್ಯಪ್ಪ ಉಪಸ್ಥಿತರಿದ್ದರು.







