ಕಾರ್ಕಳ: ಮನೆಗೆ ಸಿಡಿಲು ಬಡಿದು ಹಾನಿ
ಉಡುಪಿ, ಜೂ.3: ಕಾರ್ಕಳ ತಾಲೂಕಿನ ಕೆರೆಬೆಟ್ಟು ಗ್ರಾಮದ ಸುಮತಿ ಶೆಟ್ಟಿ ಎಂಬವರ ಮನೆಗೆ ಇಂದು ಸಿಡಿಲು ಬಡಿದು ಮನೆಯ ವಿದ್ಯುತ್ ಸಲಕರಣೆಗಳು ಸಂಪೂರ್ಣ ಹಾನಿಗೊಂಡಿರುವುದಲ್ಲದೇ, ಮನೆಯ ಗೋಡೆ ಬಿರುಕು ಬಿಟ್ಟಿರುವ ಬಗ್ಗೆ ವರದಿ ಬಂದಿದೆ ಎಂದು ತಹಶೀಲ್ದಾರ್ ಕಚೇರಿ ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸರಾಸರಿ 28.93ಮಿ.ಮೀ. ಮಳೆಯಾಗಿದೆ.
ಕಾರ್ಕಳದಲ್ಲಿ ಅತ್ಯಧಿಕ 41.6ಮಿ.ಮೀ., ಉಡುಪಿಯಲ್ಲಿ 26.4 ಹಾಗೂ ಕುಂದಾಪುರದಲ್ಲಿ 18.8ಮಿ.ಮೀ. ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ.
Next Story