‘ರೈತರ ಸಾಲಮನ್ನಾ ಒತ್ತಾಯ ಮಾಡಲು 'ಜು.10ರಂದು ಬೃಹತ್ ಸಮಾವೇಶ': ಯಡಿಯೂರಪ್ಪ
ಬೆಂಗಳೂರು, ಜೂ.3: ರಾಜ್ಯದ ರೈತರು ಸಹಕಾರಿ ಸಂಘಗಳ ಮೂಲಕ ಪಡೆದಿರುವ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡುವಂತೆ ಒತ್ತಡ ಹೇರಲು ಜು.10ರಂದು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪತಿಳಿಸಿದ್ದಾರೆ.
ಶನಿವಾರ ಕೆ.ಆರ್.ಪುರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 4-5 ಲಕ್ಷ ರೈತರು ಪಾಲ್ಗೊಳ್ಳಲಿರುವ ಬೃಹತ್ ಸಮಾವೇಶ ಇದಾಗಲಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೂರೆ ದಿನಗಳಲ್ಲಿ ಕೇಂದ್ರದ ನೆರವು ಇಲ್ಲದೆ ರೈತರ 1 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ನಾನು ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಆದರೆ, ನಾನು ಪ್ರವಾಸ ಕೈಗೊಂಡಿರುವ 12 ಜಿಲ್ಲೆಗಳಲ್ಲಿ ಎಲ್ಲಿಯೂ ಮಳೆ ಬಂದಿಲ್ಲ. ಯಾವ ಜಲಾಶಯವು ಭರ್ತಿಯಾಗಿಲ್ಲ. ಈ ಪುಣ್ಯಾತ್ಮ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯಕ್ಕೆ ಇಂತಹ ದಿನಗಳು ಬಂದಿವೆ ಎಂದು ಯಡಿಯೂರಪ್ಪಟೀಕಿಸಿದರು.
ದಲಿತರ ಕಾಲನಿಗಳಿಗೆ ನಾನು ಭೇಟಿ ನೀಡುತ್ತಿರುವುದು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂಬೇಡ್ಕರ್ ಅವರ ಶವಸಂಸ್ಕಾರವನ್ನು ರಾಜಘಾಟ್‌ನಲ್ಲಿ ಮಾಡಲು ಅವಕಾಶ ನೀಡದ ದಲಿತ ವಿರೋಧಿ ಕಾಂಗ್ರೆಸ್‌ಗೆ, ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಜು.10ರಂದು ಬೃಹತ್ ಸಮಾವೇಶ: ಯಡಿಯೂರಪ್ಪ