ಪುತ್ತೂರಿನಲ್ಲಿ ಜಿಲ್ಲಾಮಟ್ಟದ ಬಂಟರ ಯುವ ಸಮ್ಮೇಳನ
ಪುತ್ತೂರು. ಜೂ,3 : ಪುತ್ತೂರುತಾಲೂಕು ವಿದ್ಯಾರ್ಥಿ ಬಂಟರ ಸಂಘದಆಶ್ರಯದಲ್ಲಿ ತಾಲ್ಲೂಕು ಬಂಟರ ಸಂಘ ,ಯುವ ಮತ್ತು ಮಹಿಳಾ ಬಂಟರ ಸಂಘದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಬಂಟರ ಯುವ ಸಮ್ಮಿಲನ ಕಾರ್ಯಕ್ರಮ ಜೂ.11ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಲಿದೆ ಎಂದು ತಾಲ್ಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪುನಿತ್ ರೈ ಏಳ್ನಾಡುಗುತ್ತು ಅವರು ತಿಳಿಸಿದರು.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು ಅಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಆ ಬಳಿಕ ದ.ಕ.ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಪ್ರತಿಷ್ಠಿತ ಬಂಟ ಸಮಾಜದ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಭಾಗದ ಆಯ್ದ 11 ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ.25 ಸಾವಿರ, ದ್ವಿತೀಯ ಬಹುಮಾನ ರೂ.15 ಸಾವಿರ ಹಾಗೂ ತೃತೀಯ ಬಹುಮಾನ ರೂ.10 ಸಾವಿರ ನೀಡಲಾಗುವುದು ಎಂದರು.
ಸಂಜೆ 5 ಗಂಟೆಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯುವುದು. ಶಾಸಕಿ ಶಕುಂತಳಾ ಶೆಟ್ಟಿ ಅವರು ಉದ್ಘಾಟಿಸುವರು. ರಾಜ್ಯ ಸಚಿವ ಬಿ.ರಮಾನಾಥರೈ, ಸಂಸದ ನಳಿನ್‌ಕುಮಾರ್ ಕಟೀಲು, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ, ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗಳ ಸಂಚಾಲಕ ಮೋಹನ ಆಳ್ವ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿತೇರ್ಗಡೆ ಹೊಂದಿದ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರದ ಸಾಧಕರಾದ ಕ್ಯಾಷ್ಟನ್ ಕೃತಿ ಜಿತೇಶ್ ಶೆಟ್ಟಿ, 2015ರ ಮಿಸ್ಟರ್ ವಲ್ಡ್ ಪವನ್ ಶೆಟ್ಟಿ, ಪ್ರೊ.ಕಬಡ್ಡಿ ಆಟಗಾರ ಪ್ರಶಾಂತ್‌ರೈಕೈಕಾರ, ಅಂತರ್‌ರಾಷ್ಟ್ರೀಯ ಈಜು ಪಟು ವೈಷ್ಣವ್ ಹೆಗ್ಡೆ ಪುತ್ತೂರು ಹಾಗೂ ಹರ್ಷಕುಮಾರ್‌ರೈ ಮಾಡಾವು ಅವರನ್ನು ಸನ್ಮಾನಿಸಲಾಗುವುದುಎಂದರು.
ಸಭಾಕಾರ್ಯಕ್ರಮದ ಬಳಿಕ ‘ಮಿಸ್ಟರ್ ಆ್ಯಂಡ್ ಮಿಸ್ ಬಂಟ್ ’ ಕಾರ್ಯಕ್ರಮ, ಹಗಲು ಸ್ಪರ್ಧಾಕಾರ್ಯಕ್ರಮದಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ಸುಡುಮದ್ದು ಪ್ರದರ್ಶನ ನಡೆಯುವುದು. ರಾತ್ರಿ 7.70ಕ್ಕೆ ಸಮಾರೋಪ ಸಮಾರಂಭ ನಡೆಯುವುದು .ಬಂಟರ ಸೊಬಗಿನ ವಸ್ತು ಪ್ರದರ್ಶನ, ಉದ್ಯೋಗ ಮಾಹಿತಿ, ಬಂಟ ಸಮುದಾಯದಚಿತ್ರ ನಟ-ನಟಿಯರ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ವಿದ್ಯಾರ್ಥಿ ಬಂಟ ಸಂಘದ ಉಪಾಧ್ಯಕ್ಷ ಆಕಾಶ್‌ರೈ, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಶೋಭಿತ್‌ರೈ ಉಪಸ್ಥಿತರಿದ್ದರು







