ಕತ್ತಿಯಿಂದ ಕಡಿದು ಹಲ್ಲೆ
ಬಂಟ್ವಾಳ, ಜೂ. 3: ಅಳಿಯನೋರ್ವ ಸೋದರ ಮಾವನಿಗೆ ಕತ್ತಿಯಿಂದ ಕಡಿದು ಗಂಭೀರ ಹಲ್ಲೆ ನಡೆಸಿರುವ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕೊಡುಂಗಾಯಿ ಎಂಬಲ್ಲಿ ನಡೆದಿದೆ.
ಗಾಯಾಳು ಕೊಡುಂಗಾಯಿ ನಿವಾಸಿ ಜನಾರ್ದನ ಶೆಟ್ಟಿಯನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜರ್ನಾದನ ಶೆಟ್ಟಿಯ ಅಕ್ಕನ ಮಗ ಕೊಡುಂಗಾಯಿ ನಿವಾಸಿ ಭಾಸ್ಕರ ಆರೋಪಿ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭೂಮಿಗೆ ಸಂಬಂಧಿಸಿ ಎರಡು ಕುಟುಂಬದ ನಡುವೆ ಕೆಲವು ಸಮಯದಿಂದ ಇದ್ದ ಕಲಹವೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಪ್ರಕರಣ ದಾಖಲಿಸಿರುವ ವಿಟ್ಲ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





