ಅಳಿಯೂರಿನಲ್ಲಿ ಸರ್ಕಾರಿ ಪದವಿ ಪೂರ್ವಕಾಲೇಜು :ಕ್ಯಾ. ಕಾರ್ಣಿಕ್ ಭರವಸೆ
ಮೂಡುಬಿದಿರೆ. ಜೂ,3: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಅಗತ್ಯವಿದ್ದು, ಅಳಿಯೂರಿನಲ್ಲಿ ಪ್ರೌಢಶಾಲೆಯಿಂದ ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ.ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದ್ದು, ಮುಂದಿನ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಕಾಲೇಜು ಮಂಜೂರು ಾಡಲು ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕಕ್ಯಾ.ಗಣೇಶ್‌ಕಾರ್ಣಿಕ್ ಭರವಸೆ ನೀಡಿದರು.
2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ವಲಯಕ್ಕೆ ಪ್ರಥಮ ಸ್ಥಾನಿಯಾಗಿರುವ ಅಳಿಯೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರಿಗೆ ಹಳೆ ವಿದ್ಯಾರ್ಥಿಗಳು ಶುಕ್ರವಾರ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದಅಶ್ವತ್ಥ್(587 ಅಂಕ) ಅಕ್ಷತಾ(580), ಶಿವರಾಜ್(569), ಸಮೀಕ್ಷಾಜೈನ್(541), ಶ್ರವಣ್ (534), ಪ್ರತೀಕ್ಷಾ ಶೆಟ್ಟಿ(532) ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾದ ಶಾಲೆಯ ಮುಖ್ಯ ಶಿಕ್ಷಕಿ ರೋಸಾ ವಿ.ಜೆ, ಸಹಶಿಕ್ಷಕರಾದ ಮಹಾದೇವ್, ವಸಂತ, ರೇಖಾ, ಬಾಬಿ, ಸುಬ್ರಹ್ಮಣ್ಯಅವರನ್ನುಅಭಿನಂದಿಸಲಾಯಿತು. ಸಿಡಿಲಾಘಾತಕ್ಕೆ ಬಲಿಯಾದ ಶಾಲೆಯ ವಿದ್ಯಾರ್ಥಿ ಲವಲೇಶ್‌ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಳಿಯೂರು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ಸಮಾರಂಭದ ಅಧ್ಯಕ್ಷತೆವಹಿಸಿದರು. ನೆಲ್ಲಿಕಾರುಗ್ರಾಮ ಪಂಚಾಯಿತಿಅಧ್ಯಕ್ಷಜಯಂತ್ ಹೆಗ್ಡೆ, ಧರೆಗುಡ್ಡೆ ಪಂಚಾಯಿತಿಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ವಾಲ್ಪಾಡಿಗ್ರಾಮ ಪಂಚಾಯಿತಿ ಸದಸ್ಯಲಕ್ಷ್ಮಣ ಪೂಜಾರಿ, ಪಂಚಾಯಿತಿ ಸದಸ್ಯ, ಶಾಲೆಯ ಹಳೇ ವಿದ್ಯಾರ್ಥಿಗಣೇಶ್ ಬಿ.ಅಳಿಯೂರು, ವಿ.ಎಸ್‌ಎರೆಂಜರ್ಸ್ ಮಾಲೀಕರಮಾನಾಥ ಸಾಲ್ಯಾನ್ ಮುಖ್ಯಅತಿಥಿಯಾಗಿದ್ದರು. ಸಂಗೀತಾ ಶ್ಯಾನುಭೋಗ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಪ್ರಮೋದ್ ಅನಿಸಿಕೆ ವ್ಯಕ್ತಪಡಿಸಿದರು.ಸುನೀಲ್ ಪಣಪಿಲ, ಗಿರೀಶ್‌ಕಾರ್ಯಕ್ರಮ ನಿರೂಪಿಸಿದರು.







