ಗಡ್ಡ ಬೋಳಿಸಲು ನಿರಾಕರಿಸಿದ ಪತಿಯ ಮೇಲೆ ಬಿಸಿನೀರು ಎರಚಿದ ಪತ್ನಿ!

ಉತ್ತರ ಪ್ರದೇಶ, ಜೂ.3: ಗಡ್ಡ ಬೋಳಿಸದ ಪತಿಯ ಮೇಲೆ ಕೋಪಗೊಂಡ ಪತ್ನಿ ಬಿಸಿ ನೀರು ಎರಚಿದ ಘಟನೆ ನಡೆದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಸಲ್ಮಾನ್ ಹಾಗೂ ಆತನ ಪತ್ನಿ ನಗ್ಮಾಳ ನಡುವೆ ಗಡ್ಡ ಬೋಳಿಸುವ ವಿಷಯಕ್ಕೆ ಸಂಬಂಧಿಸಿ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಸಲ್ಮಾನ್ ಗಡ್ಡ ಬೋಳಿಸಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಸಲ್ಮಾನ್ ನ ಪತ್ನಿ ಬಿಸಿನೀರನ್ನು ಆತನ ಮೇಲೆ ಎರಚಿದ್ದಾಳೆ.
“ಘಟನೆಗೆ ಸಂಬಂಧಿಸಿ ನಗ್ಮಾಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಪ್ರಕಾಶ್ ಯಾದವ್ ಮಾಹಿತಿ ನೀಡಿದ್ದಾರೆ.
Next Story





