ಜೆಎಸ್‌ಎಸ್ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ
ಜೂ,3 :03-06-17 ರ ಮಾರ್ಚ್‌ನಲ್ಲಿ ನಡೆದಿದ್ದ ಸಿ ಬಿ ಎಸ್ ಇ 10ನೇ ತರಗತಿಯ ಪರೀಕ್ಷೆಯಲ್ಲಿ ತಾಲ್ಲೂಕಿನ ಬಾಗೆ ಜೆಎಸ್‌ಎಸ್ ಪಬ್ಲಿಕ್ ಶಾಲೆಯು ಶೇ 100 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ 64 ವಿದ್ಯಾರ್ಥಿಗಳಲ್ಲಿ 03 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ 100 ಕ್ಕೆ 100 ಅಂಕ (10 ಕ್ಕೆ 10 ಗ್ರೇಡ್ ) ಗಳನ್ನು ಗಳಿಸಿದ್ದಾರೆ. 18 ವಿದ್ಯಾರ್ಥಿಗಳು 9 ರಿಂದ 9.8 ರ ವರೆಗಿನಗ್ರೇಡ್ ಪಾಯಿಂಟ್ಸ್‌ಗಳನ್ನು, 22 ವಿದ್ಯಾರ್ಥಿಗಳು 8 ರಿಂದ 8.9 ರ ವರೆಗಿನಗ್ರೇಡ್ ಪಾಯಿಂಟ್ಸ್‌ಗಳನ್ನು, 9 ವಿದ್ಯಾರ್ಥಿಗಳು 7 ರಿಂದ 7.9 ರ ವರೆಗಿನಗ್ರೇಡ್ ಪಾಯಿಂಟ್ಸ್‌ಗಳನ್ನು ಮತ್ತು 12 ವಿದ್ಯಾರ್ಥಿಗಳು 6 ರಿಂದ 6.9 ರ ವರೆಗಿನಗ್ರೇಡ್ ಪಾಯಿಂಟ್ಸ್‌ಗಳನ್ನು ಗಳಿಸಿರುತ್ತಾರೆ.
ವಿಶಾಖ್. ಎಲ್, ನಿಶಾಂತ್.ಬಿ.ಎಸ್ ಮತ್ತು ಮೌಲ್ಯ.ಎಸ್, 10 ಕ್ಕೆ 10 ಗ್ರೇಡ್ ಪಾಯಿಂಟ್ಸ್‌ಗಳನ್ನು ಗಳಿಸಿದ್ದಾರೆ, ಪೂಜಿತಡಿ.ಜೆ ಮತ್ತು ಪ್ರಶಾಂತ್.ಬಿ.ಕೆ 9.8. ಗ್ರೇಡ್ ಪಾಯಿಂಟ್ಸ್‌ಗಳನ್ನು, ಮನುವಚನ್, ಸಹನ ಎಸ್.ಜಿ ಮತ್ತು ಸೃಜನಪಿ 9.6 ಗ್ರೇಡ್ ಪಾಯಿಂಟ್ಸ್‌ಗಳನ್ನು, ಅನುಜ್ಞವೈ.ಎಮ್, ಅನನ್ಯಕೆ.ಪಿ.ಅನನ್ಯಎಸ್‌ಅಶೋಕ್, ಮೇಘನಕೆ.ಸಿ, ಮಹಮದ್‌ಉವೇಜ್, ನಿಯತ್‌ಎಮ್ ಶೆಟ್ಟಿ ಮತ್ತು ಸುಹ ಜ್ಹಹಿನಾಬ್ 9.4 ಗ್ರೇಡ್ ಪಾಯಿಂಟ್ಸ್‌ಗಳನ್ನು,ಅನುಷ ಆರ್.ಎನ್, ಕುಮುದಡಿ.ಕೆ, ಸಾದ್ವಿಪಟೇಲ್ಹೆಚ್.ಎ ಮತ್ತು ುಬ್ರಹ್ಮಣ್ಯಜಿ.ಯು 9.2 ಗ್ರೇಡ್ ,ಹರ್ಷಿತಎಚ್. ಜಿ ಮತ್ತುಯಶಸ್‌ಆರ್ ಶೆಟ್ಟಿ- 9.0 ಗ್ರೇಡ್ ಗಳಿಸಿರುತ್ತಾರೆ.
ಶಾಲೆಯು ಸತತ 8 ವರ್ಷಗಳಿಂದಲೂ ಶೇ.100 ಕ್ಕೆ 100 ರಷ್ಟು ಫಲಿತಾಂಶವನ್ನು ಪಡೆದಿರುತ್ತದೆ. ಅತ್ಯುತ್ತಮ ಪ್ರತಿಭೆಯನ್ನು ಮೆರೆದುಉತ್ತಮ ಫಲಿತಾಂಶದೊಂದಿಗೆ ಶಾಲೆಯಕೀರ್ತಿ ಪತಾಕೆಯನ್ನುಉತ್ತುಂಗಕ್ಕೊಯ್ದ ವಿದ್ಯಾರ್ಥಿವೃಂದವನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.







