ಬೆಳ್ತಂಗಡಿ ತಾ. ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮನೋಹರ್ ಬಳೆಂಜ

ಬೆಳ್ತಂಗಡಿ, ಜೂ.3: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಅಧ್ಯಕ್ಷ ದೇವಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದು 2017-18 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ಅಧ್ಯಕ್ಷರಾಗಿ ವಿಜಯವಾಣಿ ವರದಿಗಾರ ಮನೋಹರ ಬಳಂಜ, ಉಪಾಧ್ಯಕ್ಷರಾಗಿ ವಿಜಯಕರ್ನಾಟಕ ವರದಿಗಾರ ಭುವನೇಶ್ ಗೇರುಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಜತೆ ಕಾರ್ಯದರ್ಶಿಯಾಗಿ ಸುದ್ದಿಬಿಡುಗಡೆಯ ವರದಿಗಾರ ಪದ್ಮನಾಭ ಕುಲಾಲ್, ಕೋಶಾಧಿಕಾರಿಯಾಗಿ ಹೊಸದಿಗಂತ ಪತ್ರಿಕೆಯ ದೀಪಕ್ ಆಠವಳೆ ಅವಿರೋಧವಾಗಿ ಆಯ್ಕೆಯಾದರು.
ಸದಸ್ಯರಾಗಿ ದೇವಿ ಪ್ರಸಾದ್ (ಜೈಕನ್ನಡಮ್ಮ), ಆರ್.ಎನ್. ಪೂವಣಿ (ಪ್ರಜಾವಾಣಿ), ಲಕ್ಷ್ಮೀ ಮಚ್ಚಿನ (ಉದಯವಾಣಿ), ಶ್ರೀನಿವಾಸ ತಂತ್ರಿ ( ಸಂಯುಕ್ತ ಕರ್ನಾಟಕ), ಪುಷ್ಪರಾಜ ಶೆಟ್ಟಿ ( ಸಂಯುಕ್ತಕರ್ನಾಟಕ), ಮಂಜುನಾಥ ರೈ (ಸುದ್ದಿ ಬಿಡುಗಡೆ), ಬಿ.ಎಸ್. ಕುಲಾಲ್ (ಸುದ್ದಿ ಬಿಡುಗಡೆ), ಅಶ್ರಫ್ ಆಲಿ ಕುಂಞ (ಸುದ್ದಿ ಬಿಡುಗಡೆ), ಅಚುಶ್ರೀ ಬಾಂಗೇರ (ಕರಾವಳಿ ಅಲೆ), ಹೃಷಿಕೇಶ್ ಧರ್ಮಸ್ಥಳ (ಜೈಕನ್ನಡಮ್ಮ), ಧನಕೀರ್ತಿ ಅರಿಗ (ಸಂಜೆ ವಾಣಿ), ಸಂಜೀವ ಎನ್. ಸಿ (ಟೈಮ್ಸ್‌ಆಫ್‌ಕುಡ್ಲ) ಮುಂದುವರಿಯಲಿದ್ದಾರೆ. ಆರ್.ಎನ್. ಪೂವಣಿ ಚುನಾವಣಾಧಿಕಾರಿಯಾಗಿದ್ದರು.
ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕ ಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಜೂ. 1 ರಂದು ಪತ್ರಿಕಾ ದಿನಾಚರಣೆ ನಡೆಸುವುದೆಂದು, ಪರ್ತಕರ್ತರಿಗಾಗಿ ಹೊಸ ಕಟ್ಟಡದ ಕಾರ್ಯಗಳನ್ನು ಮುಂದುವರಿಸುವುದೆಂದು ತೀರ್ಮಾನಿಸಲಾಯಿತು.







