ಖರೀದಿಸಿದ ಗಂಟೆಯೊಳಗೆ 90 ವರ್ಷದ ಮಾಲಕಿಯನ್ನು ಕೊಂದ ನಾಯಿ!

ವರ್ಜೀನಿಯಾ, ಜೂ.3: ಖರೀದಿಸಿದ ಗಂಟೆಯೊಳಗೆ ನಾಯಿಯೊಂದು 90 ವರ್ಷದ ಮಾಲಕಿಯನ್ನು ಕೊಂದು ಹಾಕಿದ ಘಟನೆ ವರ್ಜೀನಿಯಾದಲ್ಲಿ ನಡೆದಿದೆ.
ಮಾರ್ಗರೇಟ್ ಕಾಲ್ವಿನ್ ಎಂಬ ಮಹಿಳೆ ಫಾರೆವರ್ ರಿಹಾಬಿಲಿಟೇಶನ್ ಕೇಂದ್ರದಿಂದ ಪಿಟ್ ಬುಲ್ ನಾಯಿಯೊಂದನ್ನು ಖರೀದಿಸಿದ್ದರು. ಮನೆಯ ಹಿಂಭಾಗದಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದ ಮಾರ್ಗರೇಟ್ ಇದ್ದಕ್ಕಿದ್ದಂತೆ ಸಹಾಯಕ್ಕಾಗಿ ಬೊಬ್ಬಿಟ್ಟಿದ್ದರಿಂದ ಮಗಳು ಲಿಂಡಾ ಸ್ಥಳಕ್ಕೆ ಧಾವಿಸಿದ್ದರು. ಈ ಸಂದರ್ಭ ಅಲ್ಲಿನ ದೃಶ್ಯ ಕಂಡ ಲಿಂಡಾ ಬೆಚ್ಚಿಬಿದ್ದರು.
ಒಂದು ಗಂಟೆಯ ಮೊದಲು ಖರೀದಿಸಿದ್ದ ನಾಯಿ ಮಾರ್ಗರೇಟ್ ರನ್ನು ಕಚ್ಚಿ ಎಳೆದಾಡುತ್ತಿತ್ತು. ಆಕೆಯ ಕುತ್ತಿಗೆ, ಭುಜ ಹಾಗೂ ಕಾಲುಗಳನ್ನು ಕಚ್ಚಿಹಾಕಿತ್ತು. ಕೂಡಲೇ ಲಿಂಡಾ ಸುತ್ತಿಗೆಯಿಂದ ನಾಯಿಗೆ ಹೊಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಾರ್ಗರೇಟ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.
Next Story