Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ನಾನು ಜನರ ಗಾಯಗಳನ್ನು ಗುಣಪಡಿಸಲು...

ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ - ಟಿಪ್ಪುಸುಲ್ತಾನ್

ಇತಿಹಾಸ-ವರ್ತಮಾನ

ಲಕ್ಷ್ಮೀಪತಿ .ಸಿ.ಜಿಲಕ್ಷ್ಮೀಪತಿ .ಸಿ.ಜಿ4 Jun 2017 1:10 PM IST
share
ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ - ಟಿಪ್ಪುಸುಲ್ತಾನ್

ಟಿಪ್ಪು ಸುಲ್ತಾನ್ 18ನೆ ಶತಮಾನದಲ್ಲಿ ಭಾರತ ಕಂಡ ಅತ್ಯಾಧುನಿಕ ರಾಜ. ಕೇವಲ 49 ವರ್ಷಗಳ ಕಾಲ ಬದುಕಿದ್ದ ಟಿಪ್ಪು ತನ್ನ ಸಮಕಾಲೀನರಿಗಿಂತ ಪ್ರಬುದ್ಧನಾಗಿದ್ದ ರಾಜ. ಟಿಪ್ಪುವನ್ನು ಬಿಡಿಬಿಡಿ ಘಟನೆಗಳಿಂದ ಮತ್ತು ಈಗಿನ ಸೈದ್ಧಾಂತಿಕ ಮತ್ತು ಚಾರಿತ್ರಿಕ ಮಾನದಂಡಗಳಿಂದ ಅಳೆಯಲು ಪ್ರಯತ್ನಿಸಲಾಗುತ್ತಿದೆ. ಕೆಲವರು ಟಿಪ್ಪುವನ್ನು ಮತಾಂಧನಂತೆ ಬಿಂಬಿಸಿದ್ದಾರೆ.

ಭಾರತೀಯ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಿಟ್ಟ ಧೀರೋದಾತ್ತ ರಾಜನ ನೆನಪನ್ನು ಜನಮಾನಸ ದಿಂದ ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸಂಬಂಧ, ವ್ಯಾಪಾರ, ಕೃಷಿ, ಯುದ್ಧ ಮತ್ತು ಆಡಳಿತ ಪ್ರತಿಯೊಂದರ ಬಗೆಗೂ ಆಧುನಿಕವಾಗಿ ಯೋಚಿಸಬಲ್ಲ ವನಾಗಿದ್ದ ಟಿಪ್ಪು ಆಳದಲ್ಲಿ ಕವಿ ಮತ್ತು ತತ್ವಜ್ಞಾನಿ ಯಾಗಿದ್ದ. ಇದನ್ನು ಅರಿತುಕೊಳ್ಳಲು ಟಿಪ್ಪುವಿನ ಪತ್ರವ್ಯವಹಾರವನ್ನು ಗಮನಿಸಬೇಕು. ಆತನ ಪತ್ರಗಳನ್ನು ನ್ಯಾಶನಲ್ ಆರ್ಕೈವ್ಸ್ ಆಫ್ ಇಂಡಿಯ, ಕೋಲ್ಕತಾ, ಮದರಾಸು ಮತ್ತು ಪಾಂಡಿಚೇರಿ ಲೈಬ್ರರಿಗಳಿಂದ ಸಂಗ್ರಹಿಸಿ, ಮತ್ತಷ್ಟು ದಾಖಲೆಗಳನ್ನು ಇಂಗ್ಲೆಂಡಿನಿಂದ ತರಿಸಿಕೊಂಡ ವಿದ್ವಾಂಸ ಭಗವಾನ್, ಎಸ್.ಗಿದ್ವಾನಿಯವರು ತಮ್ಮ ‘ದಿ ಸ್ವೋರ್ಡ್ ಆಫ್ ಟಿಪ್ಪುಸುಲ್ತಾನ್’ ಎಂಬ ಕೃತಿಯಲ್ಲಿ ಕಡೆದಿಟ್ಟಿದ್ದಾರೆ. ಆ ಪುಸ್ತಕದಲ್ಲಿ ಪ್ರಕಟವಾಗಿರುವ ಟಿಪ್ಪುಸುಲ್ತಾನನ ಪತ್ರಗಳು ಆತನೊಳಗಿರುವ ಕವಿ ಮತ್ತು ತತ್ವಜ್ಞಾನಿಯನ್ನು ತೆರೆದಿಡುತ್ತದೆ.

ಕವಿ ಹೃದಯದ ರಾಜನೊಬ್ಬನ ಎದೆಯ ದನಿಯನ್ನು ಓದುಗರು ಆಲಿಸ ಲೆಂದು ಈ ಅನುವಾದವನ್ನು ನೀಡುತ್ತಿದ್ದೇವೆ.

‘‘ನನ್ನ ಜೀವನವನ್ನು ಪ್ರಶಾಂತವಾಗಿ ನನ್ನ ಪ್ರೀತಿಯ ಪುಸ್ತಕಗಳೊಡನೆ ಮತ್ತು ನನ್ನದೇ ಕನಸುಗಳೊಡನೆ ಕಾಲ ಕಳೆಯುವುದಕ್ಕಿಂತ ಖಡ್ಗ ಹಿಡಿದು ನಡೆಯುವುದು ನಿಜವಾಗಿಯೂ ಒಳ್ಳೆಯದೇ?

ನನ್ನ ಹೆಂಡತಿ ಮಕ್ಕಳೊಡನೆ ಸ್ವಲ್ಪ ಸಮಯವಾದರೂ ಸುಂದರವಾಗಿ ಕಾಲಕಳೆಯಲು ಹಂಬಲಿಸುವ ನಾನು, ಸದಾಕಾಲ ಯುದ್ಧವನ್ನು ಬೆಂಬತ್ತಿ ಕುದುರೆಯ ಮೇಲೆ ಕುಳಿತು ಕಾಲ ಕಳೆಯಬೇಕೇ? ಪ್ರಾರ್ಥನೆಯ ಕರೆಗಿಂತ ಕತ್ತಿಯ ಕರೆಯೇ ಪ್ರಬಲವಾಗಿ ಹೋಯಿತೇ? ಗುಡಿಗೋಪುರ ಅಥವಾ ಸಂತನಿಗಿಂತ ಯುದ್ಧ ಮೈದಾನವೇ ಪ್ರಧಾನವೇ?

ಪೂರ್ಣಯ್ಯ

ಸುತ್ತ ಇರುವ ಬೆಟ್ಟಗುಡ್ಡಗಳನ್ನು ಚಿತ್ರಿಸಲು ಇಷ್ಟಪಡುತ್ತೇನೆ. ಪೂರ್ಣಯ್ಯ ನನಗೆ ಹೇಳು ನನ್ನಿಂದ ಕೊಲ್ಲಲ್ಪಟ್ಟವರ ರಕ್ತದಿಂದ ಚಿತ್ರ ಬಿಡಿಸಲಾಗುವುದೇ? ನಾನು ಸೂರ್ಯೋದಯವನ್ನು, ಆಗ ತಾನೇ ಬೀಸುತ್ತಿರುವ ಹೊಚ್ಚಹೊಸ ತಂಗಾಳಿಯನ್ನು ಹೂ ತುಂಬಿರುವ ಮರಗಳನ್ನು, ನೀಲಿ ಸಮುದ್ರವನ್ನು ಚಿತ್ರಿಸಲು ಬಯಸುವೆ.

ಆದರೆ ಅದು ರಕ್ತದ ಬಣ್ಣಗಳಿಂದಲ್ಲ.

ವಿಶ್ವಾಸದಿಂದ ಹೊರಹೊಮ್ಮುವ ಪ್ರಾರ್ಥನಾ ಕರೆಯಿಂದ. ಚಿತ್ರಬಿಡಿಸುವೆ, ಆದರೆ ಯುದ್ಧದಲ್ಲಿ ಗಾಯಗೊಂಡವರ ಆರ್ತನಾದದಿಂದಲ್ಲ.

ಕ್ಯಾನ್‌ವಾಸ್‌ನ ಮೇಲೆ ಮನುಷ್ಯನ ಗಾಢ ಹಂಬಲ ಮತ್ತು ಕನಸುಗಳನ್ನು ಚಿತ್ರಿಸಲು ಬಯಸುವೆನೇ ಹೊರತು ಅವನ ಸಾವು ಮತ್ತು ಅವನತಿಯನ್ನಲ್ಲ.

ನಾನು ಜನರ ಗಾಯಗಳನ್ನು ಗುಣಪಡಿಸಲು ಇರುವವನೇ ಹೊರತು ಕೊಲ್ಲಲು ಅಲ್ಲ’’.

share
ಲಕ್ಷ್ಮೀಪತಿ .ಸಿ.ಜಿ
ಲಕ್ಷ್ಮೀಪತಿ .ಸಿ.ಜಿ
Next Story
X