ಬಿಹಾರದ ಟಾಪರ್ ನ ಮತ್ತೊಂದು ವಂಚನೆ ಬಯಲಿಗೆ

ಪಾಟ್ನಾ, ಜೂ.4: ತನ್ನ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿ ಸಿಕ್ಕಿಬಿದ್ದಿದ್ದ ಬಿಹಾರದ ಕಲಾವಿಭಾಗದ ಟಾಪರ್ ಗಣೇಶ್ ಕುಮಾರ್ ಚಿಟ್ ಫಂಡ್ ಹಗರಣವೊಂದರಲ್ಲಿ ಭಾಗಿಯಾಗಿ 15 ಲಕ್ಷ ರೂ. ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಗಣೇಶ್ ಕುಮಾರ್ ರನ್ನು ವಿಚಾರಣೆ ನಡೆಸಿದ ಎಸ್ ಎಸ್ ಪಿ ಮನು ಮಹಾರಾಜ್, ಕೊಲ್ಕತ್ತಾ ಮೂಲದ ಚಿಟ್ ಫಂಡ್ ಒಂದರಲ್ಲಿ ಗಣೇಶ್ 15 ಲಕ್ಷ ರೂ, ವಂಚಿಸಿದ್ದ. ಜಾರ್ಖಾಂಡ್ ನಲ್ಲಿ ಚಿಟ್ ಫಂಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್, ತಾವು ನೀಡಿದ್ದ ಹಣ ಹಿಂದಕ್ಕೆ ನೀಡಬೇಕು ಎಂದು ಚಿಟ್ ಫಂಡ್ ಗೆ ಹಣ ಕಟ್ಟಿದ್ದವರು ಒತ್ತಾಯಿಸತೊಡಗಿದಾಗ 2013ರಲ್ಲಿ ಪಾಟ್ನಾಗೆ ಪರಾರಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ. ಬಿಹಾರದಲ್ಲಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಸಲುವಾಗಿ ಗಣೇಶ್ ತನ್ನ ವಯಸ್ಸನ್ನು 18 ವರ್ಷಗಳಷ್ಟು ಕಡಿಮೆ ಮಾಡಿಕೊಂಡಿದ್ದ ಎನ್ನಲಾಗಿದೆ.
Next Story





