ಬ್ರಿಟನ್ ಸಂಸತ್‌ಗೆ ನಿಗದಿಯಂತೆ ಚುನಾವಣೆ
ಹಿಂಸೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಹಾಳುಗೆಡವಲು ಅವಕಾಶ ನೀಡಲಾಗದು ಪ್ರಧಾನಿ ತೆರೇಸಾ ಮೇ ಘೋಷಣೆ

ಲಂಡನ್, ಜೂ. 4: ಜೂನ್ 8ರಂದು ಬ್ರಿಟನ್ ಸಂಸತ್‌ಗೆ ನಡೆಯಲಿರುವ ಚುನಾವಣೆಯು ನಿಗದಿಯಂತೆ ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ರವಿವಾರ ಹೇಳಿದ್ದಾರೆ.
ಶನಿವಾರ ರಾತ್ರಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ರವಿವಾರ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಲಾಗಿದೆ, ಆದರೆ ಸೋಮವಾರ ಪುನಾರಂಭಗಳ್ಳಲಿದೆ ಎಂದರು.
‘‘ಹಿಂಸೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಹಾಳುಗೆಡವಲು ಅವಕಾಶ ನೀಡಬಾರದು. ಹಾಗಾಗಿ, ಚುನಾವಣಾ ಪ್ರಚಾರವು ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಪುನಾರಂಭಗೊಳ್ಳಲಿದೆ. ಚುನಾವಣೆಯು ನಿಗದಿಯಂತೆ ಗುರುವಾರ ನಡೆಯುವುದು’’ ಎಂದು ತೆರೇಸಾ ನುಡಿದರು.
ಭಯೋತ್ಪಾದನೆಯ ವಿರುದ್ಧದ ಸಮರವನ್ನು ಸೇನಾ ಕಾರ್ಯಾಚರಣೆಯೊಂದರಿಂದಲೇ ಗೆಲ್ಲವು ಸಾಧ್ಯವಿಲ್ಲ ಎಂದು ಹೇಳಿದ ಅವರು, ಬಹುತ್ವದ ಬ್ರಿಟಿಶ್ ವೌಲ್ಯಗಳನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದರು.
ಈ ವೌಲ್ಯಗಳು ‘ದ್ವೇಷ ಪ್ರಚಾರಕರ’ ವೌಲ್ಯಗಳಿಗಿಂತ ಶ್ರೇಷ್ಠವಾಗಿವೆ ಎಂದರು.
Next Story





