ಗದಗ-ಬೆಟಗೇರಿ ನಗರಗಳಿಗೆ ನೀರು ಪೂರೈಕೆ ಯೋಜನೆಗೆ ಮುಖ್ಯಮಂತ್ರಿ ಚಾಲನೆ
ಗದಗ ಜೂ. 4: ಗದಗ ಮತ್ತು ಬೆಟಗೇರಿ ಅವಳಿ ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆಗೆ ಇಲ್ಲಿನ ಮುನಸಿಪಲ್ ಕಾಲೇಜ್ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು. ಅನಂತರ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಗದಗ-ಬೆಟಗೇರಿ ಅವಳಿ ನಗರದ ಐದು ದಶಕಗಳ ಕನಸನ್ನು ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ನನಸಾಗಿಸಿರುವುದು ನಮ್ಮ ಸರಕಾರದ ಸಾಧನೆಗಳಲ್ಲಿ ಒಂದು ಎಂದು ಸಂತಸ ಹಂಚಿಕೊಂಡರು. ಗದಗ-ಬೆಟಗೇರಿ ಅವಳಿ ನಗರದ ನೀರಿನ ಬವಣೆಯನ್ನು ಹೋಗಲಾಡಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಮಾಜಿ ಸಚಿವ ಕೆ.ಎಚ್ ಪಾಟೀಲರು ಗದಗದ ಜನತೆಗೆ ‘ತುಂಗಾಪಾನ’ ಮಾಡಿಸುವ ಕನಸು ಕಂಡಿದ್ದರು. ಅವರ ನಂತರ ಅವರ ಪುತ್ರ ಹಾಲಿ ಸಚಿವ ಎಚ್.ಕೆ.ಪಾಟೀಲರ ಮುಂದಾಳತ್ವದಲ್ಲಿ ಅದು ನನಸಾಗಿದೆ ಎಂದು ಸ್ಮರಿಸಿದರು. ಸಮಾರಂಭದಲ್ಲಿ ಮಾತನಾಡಿ ಸಚಿವ ಎಚ್.ಕೆ. ಪಾಟೀಲ್, ನನ್ನ ತಂದೆ ಕೆ.ಎಚ್ ಪಾಟೀಲರ ಕನಸಿಗೆ ಮುಖ್ಯಮಂತ್ರಿ ಕೈಜೋಡಿಸಿದ್ದಾರೆ. ಗದಗದ ಜನತೆಗೆ ನಿರಂತರ ತುಂಗಾಪಾನ ಮಾಡಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನನಸು ಮಾಡಿದೆ. ಮುಂದಿನ ದಿನಗಳಲ್ಲಿ ಗದಗ-ಬೆಟಗೇರಿ ಅವಳಿ ನಗರಗಳಿಗೆ ನಿರಂತರ ಕುಡಿಯುವ ನೀರು ಒದಗಿಸಲಾಗುವುದು ಎಂದರು. ಈ ಯೋಜನೆಯಡಿ ಮೊದಲ ಹಂತವಾಗಿ 20 ಸಾವಿರ ಮನೆಗಳಿಗೆ ಕುಡಿಯುವ ನೀರು ದೊರೆಯಲಿದೆ. ತಗ್ಗು ಪ್ರದೇಶದಲ್ಲಿರುವ ಹಮ್ಮಗಿ ಬ್ಯಾರೇಜ್‌ನಿಂದ ನೀರು ಎತ್ತುವುದು ಬಹಳ ಕಠಿಣವಾಗಿತ್ತು. ಆದರೂ ಆಧುನಿಕ ತಂತ್ರಜ್ಞ್ಞಾನದ ಸಹಾಯದಿಂದ ಇದು ಸಾಧ್ಯವಾಗಿದೆ ಎಂದರು. ಅವಳಿ ನಗರದಲ್ಲಿ 300.71ಕಿ.ಮಿ ಉದ್ದದ ಆಂತರಿಕ ನೀರು ವಿತರಣಾ ಪೈಪ್‌ಲೈನ್ ಅಳವಡಿಸಿ, 5 ಜಲ ಸಂಗ್ರಹಗಾರಗಳನ್ನು ನಿರ್ಮಿಸುವುದು ಹಾಗೂ ನಗರದ ಒಟ್ಟು 41,618ಮನೆಗಳಿಗೆ ನಲ್ಲಿಯ ಸಂಪರ್ಕವನ್ನು ಒದಗಿಸಿ ನಿರಂತರವಾಗಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ ಎಂದರು. ಅವಳಿ ನಗರದಲ್ಲಿ 300.71ಕಿ.ಮಿ ಉದ್ದದ ಆಂತರಿಕ ನೀರು ವಿತರಣಾ ಪೈಪ್‌ಲೈನ್ ಅಳವಡಿಸಿ, 5 ಜಲ ಸಂಗ್ರಹಗಾರಗಳನ್ನು ನಿರ್ಮಿಸುವುದು ಹಾಗೂ ನಗರದ ಒಟ್ಟು 41,618ಮನೆಗಳಿಗೆ ನಲ್ಲಿಯ ಸಂಪರ್ಕವನ್ನು ಒದಗಿಸಿ ನಿರಂತರವಾಗಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯ 324 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು 1,040 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈ ಯೋಜನೆಯ ಕಾಮಗಾರಿಗಳು ಶೇ.75 ರಷ್ಟು ಪೂರ್ಣವಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದರು. ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯ 324 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು 1,040 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈ ಯೋಜನೆಯ ಕಾಮಗಾರಿಗಳು ಶೇ.75 ರಷ್ಟು ಪೂರ್ಣವಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಲಕ್ಕುಂಡಿ ಪ್ರಾಧಿಕಾರಕ್ಕೆ ಚಾಲನೆ ನೀಡಿದರು. ಈ ವೇಳೆ ಸಚಿವರಾದ ಯು.ಟಿ.ಖಾದರ್, ಈಶ್ವರ್ ಖಂಡ್ರೆ, ಶಾಸಕರಾದ ರಾಮಕೃಷ್ಣ ಆರ್.ದೊಡ್ಡಮನಿ, ಬಿ.ಎಸ್.ಪಾಟೀಲ್, ಬಿ.ಆರ್. ಯಾವಗಲ್, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಫೀರಸಾಬ ಕೌತಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Next Story