ಯುವತಿಯ ಅನುಮಾನಾಸ್ಪದ ಸಾವು: ಭಾವಿ ಪತಿಯ ವಿರುದ್ಧ ದೂರು
ಮಂಡ್ಯ, ಜೂ.4: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮದಲ್ಲಿ ನಡೆದಿದ್ದು, ಆಕೆಯ ಶವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿಯಾಗಬೇಕಿದ್ದವನು ಮನೆಯಲ್ಲಿದ್ದಾಗಲೇ ಈ ಘಟನೆ ನಡೆದಿದ್ದು, ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವೂ ನಾಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಯುವತಿ ತಾಯಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮದ ಜಯಮ್ಮಎಂಬವರ ಪುತ್ರಿ ಎ.ಚ್.ಟಿ.ಇಂಪನ(19) ಮೃತಪಟ್ಟಿದ್ದು, ಆಕೆಯನ್ನು ಮದುವೆಯಾಗಬೇಕಿದ್ದ ಬಾಳನಕೊಪ್ಪಲು ಗ್ರಾಮದ ಬಿ.ಆರ್.ರಾಜು ವಿರುದ್ಧ ದೂರು ದಾಖಲಾಗಿದೆ.
Next Story





