ಚಾಂಪಿಯನ್ಸ್ ಟ್ರೋಫಿ:ಪಾಕಿಸ್ತಾನಕ್ಕೆ 324 ರನ್ ಗುರಿ

ಬರ್ಮಿಂಗ್ ಹ್ಯಾಮ್, ಜೂ.4: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ನಾಲ್ಕನೆ ಪಂದ್ಯದಲ್ಲಿ ಚಾಂಪಿಯನ್ ಭಾರತ ತಂಡ ವಿರುದ್ಧ ಪಾಕಿಸ್ತಾನ 224 ರನ್ ಗುರಿ ಪಡೆದಿದೆ. ಡಿಎಲ್ ನಿಯಮದ ಅನ್ವಯ ಪಾಕ್ ಗೆ ಪರಿಷ್ಕೃತ ಗುರಿ ನೀಡಲಾಗಿದೆ.
ಇಲ್ಲಿ ರವಿವಾರ ನಡೆದ ಮಳೆ ಬಾಧಿತ ಪಂದ್ಯ ದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 48 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿತು. ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿಸಿದ ಕಾರಣ ಪಂದ್ಯವನ್ನು 48 ಓವರ್ಗೆ ಕಡಿತಗೊಳಿಸಲಾಯಿತು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ(92 ರನ್) ಹಾಗೂ ಶಿಖರ್ ಧವನ್(68) ಮೊದಲ ವಿಕೆಟ್ಗೆ 136 ರನ್ ಸೇರಿಸಿ ಭರ್ಜರಿ ಆರಂಭ ನೀಡಿದರು. ನಾಯಕ ವಿರಾಟ್ ಕೊಹ್ಲಿ (ಅಜೇಯ 81, 68 ಎಸೆತ, 6 ಬೌಂಡರಿ, 3 ಸಿಕ್ಸರ್), ಯುವರಾಜ್ ಸಿಂಗ್ (53, 32 ಎಸೆತ) ಹಾಗೂ ಹಾರ್ದಿಕ್ ಪಾಂಡ್ಯ (ಅಜೇಯ 20, 6 ಎಸೆತ, 3 ಸಿಕ್ಸರ್)ತಂಡದ ಮೊತ್ತವನ್ನು 319ಕ್ಕೆ ತಲುಪಿಸಿದರು. ರನೌಟಾದ ರೋಹಿತ್ ಶರ್ಮ (91, 119 ಎಸೆತ, 7 ಬೌಂಡರಿ, 2 ಸಿಕ್ಸರ್) ಕೇವಲ 9 ರನ್ ಗಳಿಂದ ಶತಕ ವಂಚಿತರಾದರು.





