ಸೌದಿ: 22 ಲಕ್ಷ ಮಾದಕ ದ್ರವ್ಯ ಮಾತ್ರೆ ವಶ

ಜಿದ್ದಾ, ಜೂ. 4: ಟ್ರಕ್‌ನಲ್ಲಿ ಕದ್ದು ಸಾಗಿಸುತ್ತಿದ್ದ 22 ಲಕ್ಷ ಕ್ಯಾಪ್ಟಗಾನ್ ಮಾತ್ರೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೌದಿ ಅರೇಬಿಯದ ದಿಬ ಬಂದರಿನಲ್ಲಿ ವಶಪಡಿಸಿಕೊಂಡಿದ್ದಾರೆ.
ಬಂದರಿನಲ್ಲಿ ಲಂಗರು ಹಾಕಿದ್ದ ತೆಪ್ಪವೊಂದರಲ್ಲಿ ಇರಿಸಲಾಗಿದ್ದ ಟ್ರಕ್‌ನಲ್ಲಿ ಈ ಮಾದಕ ದ್ರವ್ಯ ಮಾತ್ರೆಗಳನ್ನು ಅಡಗಿಸಿಡಲಾಗಿತ್ತು ಎಂದು ದಿಬಾ ಬಂದರಿನ ಕಸ್ಟಮ್ಸ್ ಮಹಾ ನಿರ್ದೇಶಕ ಅಲಿ ಅಲ್-ಅಟಾವಿ ತಿಳಿಸಿದರು.
ಟ್ರಕ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶೋಧ ನಡೆಸಿದಾಗ ಭಾರಿ ಪ್ರಮಾಣದ ಮಾದಕ ದ್ರವ್ಯ ಮಾತ್ರೆಗಳ ಸಂಗ್ರಹವನ್ನು ಪತ್ತೆ ಹಚ್ಚಿದರು ಎಂದರು.
Next Story





