ಐಎಸ್ ಐನಿಂದ ತರಬೇತಿ ಪಡೆದು ಭಾರತದ ಮೇಲೆ ದಾಳಿಗೆ ಸಂಚು: ಮೂವರು ಭಯೋತ್ಪಾದಕರ ಬಂಧನ

ಈಜಿಪ್ಟ್, ಜೂ.4: ಪಾಕಿಸ್ತಾನದ ಐಎಸ್ ಐನಿಂದ ತರಬೇತಿ ಪಡೆದು ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಮೂವರು ಭಯೋತ್ಪಾದಕರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಭಯೋತ್ಪಾದಕರು ಐಎಸ್ ಐ ಬೆಂಬಲಿತ ಇಂಟರ್ ನ್ಯಾಶನಲ್ ಸಿಖ್ ಯುತ್ ಫೆಡರೇಶನ್ ನೊಂದಿಗೆ ನಂಟು ಹೊಂದಿದ್ದರು ಎನ್ನಲಾಗಿದೆ. ಭಯೋತ್ಪಾದಕರನ್ನು ಗುರ್ದಯಾಲ್ ಸಿಂಗ್, ಸತ್ವಿಂದರ್ ಸಿಂಗ್ ಹಾಗೂ ಜಗ್ರೂಪ್ ಸಿಂಗ್ ಎಂದು ಗುರುತಿಸಲಾಗಿದೆ. ಗುರ್ದಯಾಲ್ ಸಿಂಗ್ ಹೋಶಿಯಾರ್ ಪುರ್ ನಿವಾಸಿಯಾಗಿದ್ದು, ಜಗ್ರೂಪ್ ಹಾಗೂ ಸತ್ವಿಂದರ್ ನವನ್ ಶಹರ್ ನಿವಾಸಿಯಾಗಿದ್ದಾರೆ. ಬಂಧಿತರಿಂದ A.32 ಬೋರ್ ಪಿಸ್ತೂಲ್, 10 ಕಾಟ್ರಿಜ್ ಗಳು ಹಾಗೂA.38 ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ. ಮೇ ತಿಂಗಳಲ್ಲಿ ಮಾನ್ ಸಿಂಗ್ ಹಾಗೂ ಶೇರ್ ಸಿಂಗ್ ಎನ್ನುವ ಇಬ್ಬರು ಭಯೋತ್ಪಾದಕರನ್ನು ಬಿಎಸ್ ಎಫ್ ಬಂಧಿಸಿತ್ತು.
Next Story





