ಬಡವರ ವೇದಿಕೆ ವತಿಯಿಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ

ಬಂಟ್ವಾಳ, ಜೂ. 4: ಬಡವರ ವೇದಿಕೆ ಗ್ರೂಪ್ ಇದರ ವತಿಯಿಂದ ಕರ್ನಾಟಕದ ನಾನಾ ಭಾಗದ ತೀರ ಬಡ ಕುಟುಂಬಳನ್ನು ಗುರುತಿಸಿ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ರಮಝಾನ್ ಹಾಗು ಸ್ಕೂಲ್ ಕಿಟ್ ವಿತರಣಾ ಸಮಾರಂಭವು ಅಮ್ಟೂರಿನಲ್ಲಿ ನಡೆಯಿತು. BJM ಅಮ್ಟೂರು ಖತೀಬರಾದ ಅಬ್ದುಲ್ ರಝಾಕ್ ಅಮ್ಜದಿ ದುಅದ ಮೂಲಕ ಸಭೆಯನ್ನು ಉದ್ಗಾಟಿಸಿದರು. ನಂತರ ಅವರು ಯುವಜನರು ಇಂದು ಸಾಮಾಜಿಕ ತಾಣಗಳಲ್ಲಿ ಅನಾವಶ್ಯಕ ಚರ್ಚೆ ಮಾಡುವುದರ ಬದಲಿಗೆ ಸಾಮಾಜಿಕ ತಾಣವನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಬೇಕು, ಇದಕ್ಕೆ ಬಡವರ ವೇದಿಕೆ ವಾಟ್ಸಪ್ ಗ್ರೂಪ್ ಮಾದರಿ ಎಂದರು. ನಂತರ ಅಧ್ಯಕ್ಷೀಯ ಭಾಷಣ ಮಾಡಿದ ಬಡವರ ವೇದಿಕೆಯ ಅಧ್ಯಕ್ಷ ಶರೀಫ್ ಕರಿಂಗಾಣ ಬಡವರನ್ನು ಅದರಿಂದ ಮುಕ್ತಿಗೊಳಿಸಲು ಕೇವಲ ಕಿಟ್ ನಿಂದ ಸಾಧ್ಯವಿಲ್ಲಾ ಬದಲಾಗಿ ಅವರನ್ನು ಉದ್ಯೋಗಿ ಮತ್ತು ವ್ಯಾಪಾರಿಗಳಾಗಿ ಮೇಲಕ್ಕೆತ್ತಬೇಕಾಗಿದೆ, ನಂತರ ಅವರು ಕಳೆದ ಒಂದು ವರ್ಷದ ಗ್ರೂಪಿನ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿದರು. ಶಿಕ್ಷಣದ ಪ್ರಾಸ್ಥಾವಿಕತೆಯ ಬಗ್ಗೆ ವಿವರಿಸಿದ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾದ ರಾಜ್ಯಾದ್ಯಕ್ಷ ಮಹಮ್ಮದ್ ತಪ್ಸೀರ್ ಇವರು ಬಡತನ ಎಂಬುದು ಶಿಕ್ಷಣಕ್ಕೆ ಅಡಚಣೆಯಲ್ಲಾ ಕಾರಣ ಇಂದು ಹಲವಾರು ಸಂಘ ಸಂಸ್ಥೆ, ಸರಕಾರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ,ಎಲ್ಲಾ ಧರ್ಮವು ವಿದ್ಯೆಗೆ ಸ್ಥಾನಮಾನವನ್ನು ಒದಗಿಸಿದೆ, ವಿದ್ಯೆಯು ಪ್ರಪಂಚವನ್ನು ಬದಲಿಸುವ ಗುರಾಣಿಯಾಗಿದೆ ಎಂದರು. ಜೆಮ್ ಪಬ್ಲಿಕ್ ಸ್ಕೂಲ್ ಇದರ ಅಧ್ಯಕ್ಷರಾದ ಹಮೀದ್ ಆಲಿ ಕಲ್ಲಡ್ಕ ಇವರು ಫಲಾನುಭವಿಗಳಿಗೆ ಹಿತ ವಚನ ನೀಡಿದರು. ವೇದಿಕೆಯಲ್ಲಿ ಹಾಜಿ ಅಬ್ದುಲ್ ಸಲಾಂ ಅಧ್ಯಕ್ಷರು BJM ಅಮ್ಟೂರು, ಪಂಚಾಯತ್ ಸದಸ್ಯರಾದ ಮಹಮ್ಮದ್ ನೆತ್ತಿಕಲ್ಲು, SSF ಕೆದಿಲ ಶಾಖೆಯ ಅಧ್ಯಕ್ಷ ಹುಸೈನ್ ಕೆದಿಲ , SKSSF ಬೊಳ್ಳಾಯಿ ಶಾಖೆಯ ಅಧ್ಯಕ್ಷ ಅಬ್ದುಲ್ ಲತೀಫ್, BJM ಇದರ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಹಿಮಮಿ ಉಪಸ್ಥಿತರಿದ್ದರು. ಮಹಮ್ಮದ್ ಆಸೀಫ್ MAS ಸದಸ್ಯರು ಬಡವರ ವೇದಿಕೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
Next Story





