ಮನೆಗೆ ನುಗ್ಗಿ ನಗ, ನಗದು ಕಳವು
ಮಂಗಳೂರು, ಜೂ. 4: ಕೋಟೆಕಾರು ಗ್ರಾಮದ ಕೊಂಡಾಣ ನಿವಾಸಿ ರವಿ ಶೆಟ್ಟಿ ಎಂಬವರ ಮನೆಯಿಂದ ನಗ, ನಗದು ಕಳವುಗೈದಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯ ಬಾಗಿಲ ಚಿಲಕವನ್ನು ಮುರಿದು ಒಳನುಗ್ಗಿ ರವಿ ಶೆಟ್ಟಿ ಅವರ 2 ಉಂಗುರಗಳು, ಅವರ ಪತ್ನಿಯ 3 ಉಂಗುರಗಳು, ಮಗುವಿನ ಸುಮಾರು ಒಂದೂವರೆ ಪವನ್ ತೂಕದ 2 ಬಳೆ ಮತ್ತು 2 ಬ್ರಾಸ್‌ಲೆಟ್, ಚಿಕ್ಕಪ್ಪ ಗಂಗಾಧರ ಅವರ ಒಂದೂವರೆ ಪವನ್ ತೂಕದ 1 ಸರ ಹಾಗೂ ಮನೆಯಲ್ಲಿದ್ದ 28,000 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕಳವಾಗಿರುವ ಚಿನ್ನಾಭರಣಗಳ ಒಟ್ಟು ವೌಲ್ಯ 1,15,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story









