Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿದ್ಯಾರ್ಥಿಗಳಿಂದ ಸುಸಜ್ಜಿತ ಉಡುಪಿ ಬಸ್...

ವಿದ್ಯಾರ್ಥಿಗಳಿಂದ ಸುಸಜ್ಜಿತ ಉಡುಪಿ ಬಸ್ ನಿಲ್ದಾಣಗಳ ವಿನ್ಯಾಸ

ವಾರ್ತಾಭಾರತಿವಾರ್ತಾಭಾರತಿ4 Jun 2017 9:54 PM IST
share
ವಿದ್ಯಾರ್ಥಿಗಳಿಂದ ಸುಸಜ್ಜಿತ ಉಡುಪಿ ಬಸ್ ನಿಲ್ದಾಣಗಳ ವಿನ್ಯಾಸ
ಉಡುಪಿ ಜೂ.4: ವಿವೇಚನಾ ರಹಿತ ಯೋಜನೆ ಮತ್ತು ಸ್ಥಳಾಭಾವಗಳಿಂದ ಅನೇಕ ಬಸ್‌ಗಳಿಗೆ ನಿಲ್ಲಲು ಸಾಧ್ಯವಾಗದೆ, ವಾಹನ ನಿಬಿಡತೆಗೆ ಕಾರಣ ವಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಉಡುಪಿ ನಗರಕ್ಕೊಂದು ಸುಸಜ್ಜಿತ ಖಾಸಗಿ ಮತ್ತು ನಗರ ಸಂಚಾರಿ ಬಸ್ ನಿಲ್ದಾಣದ ಸಂರಚನೆಯನ್ನು ಮಾಡಿದ್ದಾರೆ. ವಿಭಾಗ ಮುಖ್ಯಸ್ಥ ಡಾ.ಬಿ.ರಾಧೇಶ್ಯಾಮ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಗಳಾದ ಭುವನ ಮಿತ್ರ, ವಿಕಾಸ್ ಉಡುಪ, ವಿಕಾಸ್ ರಾವ್ ಮತ್ತು ಕಾರ್ತಿಕ್ ಪಿ. ವಿನ್ಯಾಸಕ್ಕೆ ಪೂರ್ವಭಾವಿಯಾಗಿ ಮಾಡಿದ ಸರ್ವೇಕ್ಷಣೆಯಲ್ಲಿ ನಿಲ್ದಾಣಗಳ ಮುಖ್ಯ ಸ್ಥಳಗಳನ್ನು ಮತ್ತು ಅಲ್ಲಿ ಜರಗುವ ಮುಖ್ಯ ಚಟುವಟಿಕೆಗಳನ್ನು ಗುರು ತಿಸಿದ್ದು, ಜಿಲ್ಲೆಯ ಒಟ್ಟು ಜನಸಂಖ್ಯೆ, ಬಸ್ಸುಗಳ ಸಂಖ್ಯೆ, ನಿಲ್ದಾಣಕ್ಕೆ ಬಂದು ಹೋಗುವ ಬಸ್ಸುಗಳ ಸಂಖ್ಯೆ, ಅಪಘಾತಗಳ ಒಟ್ಟು ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರು. ಸ್ಥಳದ ನಕಾಶೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ ದಿಂದ ಪಡೆದು, ನಿಲ್ದಾಣಗಳ ನೀಲ ನಕಾಶೆಯನ್ನು ವಿನ್ಯಾಸ ಮಾಡಲಾಗಿದೆ. ಖಾಸಗಿ ನಿಲ್ದಾಣದ ನೂತನ ನಕ್ಷೆಯಲ್ಲಿ ಮಂಗಳೂರು (ದಕ್ಷಿಣ) ಮತ್ತು ಕುಂದಾಪುರ(ಉತ್ತರ)ದ ಕಡೆಗೆ ಹೋಗುವ ಬಸ್‌ಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನಿಲ್ಡಾಣವನ್ನು ವಿಭಾಗಿಸಲಾಗಿದೆ. ವೇಗದೂತ ಬಸ್‌ಗಳಿಗೆ ಪ್ರತ್ಯೇಕ ಸಾಲನ್ನು ಕಲ್ಪಿಸಿ ಇರುವ ಸ್ಥಳದ ಗರಿಷ್ಠ ಬಳಕೆಯನ್ನು ಮಾಡಲಾಗುತ್ತಿದೆ. ನಡುವಿನ 45 ಡಿಗ್ರಿ ವಲಯದಲ್ಲಿ ಉಳಿದ ಬಸ್‌ಗಳಿಗೆ ನಿಲ್ಲುವ ಅವಕಾಶ ಕಲ್ಪಿಸ ಲಾಗುತ್ತಿದೆ. ಮೂರು ಮಹಡಿಗಳ ಪ್ರಸ್ತುತ ವಿನ್ಯಾಸವು ಉಳಿದ ವಾಹನಗಳಿಗೆ ಪಾರ್ಕಿಂಗ್, ಅಂಗಡಿ ಮುಂಗಟ್ಟುಗಳು, ಕುಡಿಯುವ ನೀರು, ಪ್ರಯಾಣಿಕರಿಗೆ ತಂಗಲು, ನಿಲ್ಲಲು ಸ್ಥಳಾವಕಾಶ, ಶೌಚಾಲಯಗಳು ಮುಂತಾದವುಗಳಿಗೆ ಅಪಾರ ಅವಕಾಶವನ್ನು ನೀಡಬಹುದು. ನಿಲ್ಡಾಣಕ್ಕೆ ಪ್ರವೇಶವಾಗುವಲ್ಲಿ ಪ್ರಸ್ತುತ ಇರುವ 2 ಮೀಟರುಗಳ ಎತ್ತರವನ್ನು ಕಡಿಮೆ ಮಾಡಿ ಸುಲಭಗೊಳಿಸಲಾಗಿದೆ. ಪ್ರಸ್ತುತ ಇರುವ 25 ಬಸ್‌ಗಳಿಗೆ ನಿಲ್ಲುವ ಅವಕಾಶವನ್ನು 36ಕ್ಕೇರಿಸಬಹುದು. ನಗರ ಸಂಚಾರಿ ಬಸ್ ನಿಲ್ದಾಣವು ಎರಡು ಮಹಡಿಗಳ ವಿನ್ಯಾಸವಾಗಿದ್ದು 22 ಬಸ್‌ಗಳಿಗೆ ಏಕಕಾಲಕ್ಕೆ ನಿಲ್ಲುವ ಅವಕಾಶವನ್ನು ಕಲ್ಪಿಸುತ್ತಿದೆ. ನಗರದ ಪಶ್ಚಿಮ ಭಾಗಕ್ಕೆ ಸಂಚರಿಸುವ ಬಸ್‌ಗಳು ಪ್ರಥಮ ಮಹಡಿಯಲ್ಲೂ, ಪೂರ್ವಭಾಗಕ್ಕೆ ಸಂಚರಿಸುವ ಬಸ್‌ಗಳು ನೆಲಮಹಡಿಯಲ್ಲೂ ನಿಲ್ಲುವ ಅವಕಾಶ ಕಲ್ಪಿಸ ಬಹುದು. ಮೂಲಭೂತ ಸೌಕರ್ಯಗಳಾದ ತಂಗುದಾಣ, ಶೌಚಾಲಯಗಳಿಗೆ ಇಲ್ಲಿ ಸೀಮಿತ ಅವಕಾಶ ಕಲ್ಪಿಸಲಾಗಿದೆ.
share
ವಾರ್ತಾಭಾರತಿ
ವಾರ್ತಾಭಾರತಿ
Next Story
X