ಉದ್ಯಮಿಗಳ ಹೊಡೆದಾಟ: ಇಬ್ಬರಿಗೆ ಗಾಯ
ಮಂಗಳೂರು, ಜೂ. 4: ರಿಯಲ್ ಎಸ್ಟೇಟ್ ಉದ್ಯಮಿಗಳಿಬ್ಬರು ಹೊಡೆದಾಡಿಕೊಂಡ ಘಟನೆ ರವಿವಾರ ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ನಡೆದಿದೆ. ಉರ್ವಸ್ಟೋರ್‌ನ ಭರತ್ ಹಾಗೂ ಯೆಯ್ಯೋಡಿ ಕೊಪ್ಪಳಕಾಡ್‌ನ ಸತೀಶ್ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಂಚಾಡಿಯ ದೀಪಕ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೀಪಕ್ ಅವರ ಮನೆಯೊಂದು ಮಾರಾಟಕ್ಕಿದ್ದ ಹಿನ್ನೆಲೆಯಲ್ಲಿ ಸರ್ಕ್ಯೂಟ್‌ಹೌಸ್‌ನಲ್ಲಿ ಮಾತುಕತೆ ಇತ್ತೆನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





