ನಿಧಾನಗತಿಯ ಬೌಲಿಂಗ್: ಎರಡು ಪಂದ್ಯದಿಂದ ತರಂಗ ಅಮಾನತು

ಲಂಡನ್, ಜೂ.4: ದಕ್ಷಿಣ ಆಫ್ರಿಕ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ ಐಸಿಸಿ ಮ್ಯಾಚ್ ರೆಫರಿ ಶ್ರೀಲಂಕಾದ ಹಂಗಾಮಿ ನಾಯಕ ಉಪುಲ್ ತರಂಗರನ್ನು ಎರಡು ಪಂದ್ಯಗಳಿಂದ ಅಮಾನತುಗೊಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಆಡಲಿರುವ ಇನ್ನೆರಡು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ತರಂಗ ಆಡುವುದರಿಂದ ವಂಚಿತರಾಗಿದ್ದಾರೆ. ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರು ತರಂಗಗೆ ಭಾರೀ ದಂಡದ ಜೊತೆಗೆ ಎರಡು ಪಂದ್ಯಗಳಿಂದ ಅಮಾನತುಗೊಳಿಸಿದ್ದಾರೆ. ತಂಡದ ಇತರ ಆಟಗಾರರಿಗೆ ದಂಡ ವಿಧಿಸಲಾಗಿದೆ. ಶ್ರೀಲಂಕಾ ತಂಡ 50 ಓವರ್ಗಳನ್ನು ಪೂರೈಸಲು ನಾಲ್ಕು ಗಂಟೆ, ಏಳು ನಿಮಿಷ ತೆಗೆದುಕೊಂಡಿತ್ತು. ಐಸಿಸಿ ನಿಯಮದ ಪ್ರಕಾರ ತಂಡವೊಂದು 50 ಓವರ್ಗಳ ಪಂದ್ಯವನ್ನು ಮೂರೂವರೆ ಗಂಟೆಯಲ್ಲಿ ಪೂರೈಸಬೇಕು. ಶ್ರೀಲಂಕಾ 37 ನಿಮಿಷ ಹೆಚ್ಚುವರಿ ಸಮಯ ತೆಗೆದುಕೊಂಡಿತ್ತು.
Next Story





