ಪ್ಯಾರಿಸ್ ಓಪನ್: ನಡಾಲ್ 11ನೆ ಬಾರಿ ಪ್ರಿ-ಕ್ವಾರ್ಟರ್ ಫೈನಲ್ ಗೆ

ಪ್ಯಾರಿಸ್, ಜೂ.4: ಒಂಭತ್ತು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಫ್ರೆಂಚ್ ಓಪನ್ಲ್ಲಿ 11ನೆ ಬಾರಿ ಕ್ವಾರ್ಟರ್ ಫೈನಲ್ಗೆ ತಲುಪುವ ಮೂಲಕ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದರು. ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ಫೈನಲ್ಲ್ಲಿ ಸ್ಪೇನ್ನ ನಡಾಲ್ ತಮ್ಮದೇ ದೇಶದ ರೊಬರ್ಟೊ ಬೌಟಿಸ್ಟಾ ಅಗುಟ್ರನ್ನು 6-1, 6-2, 6-2 ಸೆಟ್ಗಳ ಅಂತರದಿಂದ ಸೋಲಿಸಿದರು. ಪ್ಯಾರಿಸ್ ಓಪನ್:ಪ್ಲಿಸ್ಕೋವಾ, ಮಾರ್ಟಿಕ್ ಪ್ರಿ-ಕ್ವಾರ್ಟರ್ ಫೈನಲ್ಗೆ ಝೆಕ್ ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ಹಾಗೂ ಕ್ರೊಯೇಷಿಯದ ಪೆಟ್ರಾ ಮಾರ್ಟಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದ್ದಾರೆ. ಇಲ್ಲಿ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ನ 3ನೆ ಸುತ್ತಿನ ಪಂದ್ಯದಲ್ಲಿ ಪ್ಲಿಸ್ಕೋವಾ ಜರ್ಮನಿಯ ಕಾರಿನಾ ವಿಥೊಫ್ಟ್ರನ್ನು 7-5, 6-1 ಸೆಟ್ಗಳಿಂದ ಮಣಿಸಿದರು. ಈ ಹಿಂದೆ ಐದು ಬಾರಿ ಫ್ರೆಂಚ್ ಓಪನ್ನಲ್ಲಿ ಭಾಗವಹಿಸಿರುವ ಪ್ಲಿಸ್ಕೋವಾ ಕೇವಲ ಎರಡು ಬಾರಿ ಜಯ ಸಾಧಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಪರಾಗ್ವೆಯ ವೆರೊನಿಕಾ ಅಥವಾ ಕೊಲಂಬಿಯಾದ ಮರಿಯನಾ ಡಿ-ಮರಿನೊರನ್ನು ಎದುರಿಸಲಿದ್ದಾರೆ. ಲಾಟ್ವಿಯದ 17ನೆ ಶ್ರೇಯಾಂಕದ ಅನಾಸ್ಟೆಸಿಜಾ ಸೆವಾಸ್ಟೋವಾರನ್ನು 6-1, 6-1 ನೇರ ಸೆಟ್ಗಳಿಂದ ಸೋಲಿಸಿರುವ ವಿಶ್ವದ ನಂ.290ನೆ ಆಟಗಾರ್ತಿ ಪೆಟ್ರಾ ಮಾರ್ಟಿಕ್ ಅಂತಿಮ-16ರ ಸುತ್ತಿಗೆ ತಲುಪಿದರು. ಮಾರ್ಟಿಕ್ ಮುಂದಿನ ಸುತ್ತಿನಲ್ಲಿ ಉಕ್ರೇನ್ನ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ. 5ನೆ ಶ್ರೇಯಾಂಕದ ಸ್ವಿಟೋಲಿನಾ ಪೊಲೆಂಡ್ನ ಮೆಗ್ಡಾ ಲಿನೆಟ್ಟೆರನ್ನು 6-4, 7-5 ಸೆಟ್ಗಳಿಂದ ಮಣಿಸಿದರು.
Next Story





