ತ್ರಿರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಿ: ಭಾರತ-ಜರ್ಮನಿ ಪಂದ್ಯ ಡ್ರಾ
ಡಸೆಲ್ಡಾರ್ಫ್(ಜರ್ಮನಿ), ಜೂ.4: ತ್ರಿರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಮೆಂಟ್ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಆತಿಥೇಯ ಜರ್ಮನಿಯ ವಿರುದ್ಧ 2-2 ರಿಂದ ಡ್ರಾ ಸಾಧಿಸಿದೆ. ಶನಿವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ನಿಕ್ಲಾಸ್ ವೆಲ್ಲೆನ್ 13ನೆ ನಿಮಿಷದಲ್ಲಿ ಗೋಲು ಬಾರಿಸಿ ಜರ್ಮನಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಮನ್ದೀಪ್ ಸಿಂಗ್(45ನೆ ನಿಮಿಷ) ಹಾಗೂ ಸರ್ದಾರ್ ಸಿಂಗ್(47ನೆ ನಿ.) ಕ್ಷಿಪ್ರವಾಗಿ ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. 52ನೆ ನಿಮಿಷದಲ್ಲಿ ಗೋಲು ಬಾರಿಸಿದ ಹಿರಿಯ ಆಟಗಾರ ಟಾಬಿಯಸ್ ಹೌಕೆ ಜರ್ಮನಿ 2-2 ರಿಂದ ಸಮಬಲ ಸಾಧಿಸಲು ನೆರವಾದರು. ಭಾರತ ಸೋಮವಾರ ನಡೆಯಲಿರುವ ತನ್ನ 3ನೆ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
Next Story





