“ಮಿಸ್–ಟಿಬೆಟ್ 2017” ಕಿರೀಟ ಮುಡಿಗೇರಿಸಿದ ಕರ್ನಾಟಕದ ಯುವತಿ

ಟಿಬೆಟ್, ಜೂ.5: ಮ್ಯಾಕ್ ಲಿಯೋಗಂಜ್ ಟಿಬೆಟಿಯನ್ ಇನ್ ಸ್ಟಿಟ್ಯೂಟ್ ಆಫ್ ಪರ್ಫಾಮಿಂಗ್ ಆರ್ಟ್ಸ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದ ತೆಂಝಿನ್ ಪಾಲ್ಡನ್ “ಮಿಸ್–ಟಿಬೆಟ್ 2017”ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊಳ್ಳೇಗಾಲದವರಾದ ಪಾಲ್ಡನ್ ಸ್ಪೈಸ್ ಜೆಟ್ ಏರ್ ಲೈನ್ಸ್ ನ ಉದ್ಯೋಗಿಯಾಗಿದ್ದಾರೆ. ಭಾರತದಿಂದ 9 ಮಂದಿ ಸ್ಪರ್ಧಿಗಳು ಹಾಗೂ ಅಮೆರಿಕ ಮತ್ತು ಯುರೋಪ್ ನ ವಿವಿಧ ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಇಷ್ಟೇ ಅಲ್ಲದೆ ಬೆಂಗಳೂರಿನ ತೆಂಝಿನ್ ಕೆಚೋ ಪ್ರಥಮ ರನ್ನರ್ ಅಪ್ ಹಾಗೂ ಹಿಮಾಚಲ ಪ್ರದೇಶದ ತೆಂಝಿನ್ ನಾರ್ಡನ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಮಿಸ್ ಟಿಬೆಟ್ ವಿಜೇತೆಗೆ 1 ಲಕ್ಷ ರೂ. ಮತ್ತು ಪ್ರಥಮ ಹಾಗೂ ದ್ವಿತೀಯ ರನ್ನರ್ ಅಪ್ ಕ್ರಮವಾಗಿ 50, 25 ಸಾವಿರ ನಗದು ಬಹುಮಾನ ಗಳಿಸಲಿದ್ದಾರೆ.
Next Story





