ಸೌದಿ: ಜೂ. 18ರಂದು ಸಂಬಳ ನೀಡಲು ದೊರೆ ಆದೇಶ

ರಿಯಾದ್, ಜೂ. 5: ರಮಝಾನ್ ಹಬ್ಬದ ಹಿನ್ನೆಲೆಯಲ್ಲಿ ಈ ತಿಂಗಳ ಸಂಬಳವನ್ನು ಜೂನ್ 18ರಂದು ಪಾವತಿಸುವಂತೆ ಸೌದಿ ಅರೇಬಿಯದ ದೊರೆ ಹಾಗೂ ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ಸಲ್ಮಾನ್ ಸೂಚನೆ ನೀಡಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ರವಿವಾರ ವರದಿ ಮಾಡಿದೆ.
ದೊರೆಯ ಆದೇಶವನ್ನು ಜಾರಿಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿರುವ ಹಣಕಾಸು ಸಚಿವಾಲಯ, ಉದ್ಯೋಗಿಗಳ ಬ್ಯಾಂಕ್ ಖಾತೆಗಳಲ್ಲಿ ಜೂನ್ 18ರಂದು ರವಿವಾರ ಸಂಬಳಗಳನ್ನು ಹಾಕುವಂತೆ ಬ್ಯಾಂಕ್‌ಗಳಿಗೆ ಅಧಿಕಾರ ನೀಡುವಂತೆ ಸೌದಿ ಅರೇಬಿಯನ್ ಮನಿಟರಿ ಏಜನ್ಸಿ (ಎಸ್‌ಎಎಂಎ)ಗೆ ಸೂಚನೆಗಳನ್ನು ನೀಡುವುದಾಗಿ ತಿಳಿಸಿದೆ.
ರಮಝಾನ್ ಹಬ್ಬಕ್ಕಾಗಿ ಖರೀದಿ ಹಾಗೂ ಇತರ ಸಿದ್ಧತೆಗಳನ್ನು ಮಾಡಲು ಜನರಿಗೆ ಅನುಕೂಲವಾಗುವಂತೆ ದೊರೆ ಈ ಆದೇಶ ಹೊರಡಿಸಿದ್ದಾರೆ.
ಈ ಮೊದಲು, ರಮಝಾನ್ ತಿಂಗಳ ಸಂಬಳವನ್ನು ಶವ್ವಾಲ್ 2ನೆ ದಿನದಂದು ಕೊಡಲು ನಿಗದಿಯಾಗಿತ್ತು.
Next Story





