ಬಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜು ವಿಶ್ವನಾಥ್ ಆಯ್ಕೆ

ಮಡಿಕೇರಿ, ಜೂ.5 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ತಳ ಮಟ್ಟದಿಂದಲೇ ಸದೃಢಗೊಳಿಸಲು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಿರ್ಧರಿಸಿದ್ದು, ಪೊನ್ನಂಪೇಟೆ ಬ್ಲಾಕ್‌ನ ಬಿ.ಶೆಟ್ಟಿಗೇರಿ ಮಹಿಳಾ ಕಾಂಗ್ರೆಸ್ ವಲಯಾಧ್ಯಕ್ಷರನ್ನಾಗಿ ಮಂಜು ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಜಿ.ಆರ್.ಪುಷ್ಪಲತಾ ತಿಳಿಸಿದ್ದಾರೆ.
ಪೊನ್ನಂಪೇಟೆ ಬ್ಲಾಕ್‌ನ ಬಿ.ಶೆಟ್ಟಿಗೇರಿ ವಲಯ ಮಹಿಳಾ ಕಾಂಗ್ರೆಸ್ ಸಭೆ ಬ್ಲಾಕ್ಅಧ್ಯಕ್ಷರಾದ ಕಡೇಮಾಡ ಕುಸುಮಾ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಿ.ಆರ್.ಪುಷ್ಪಲತಾ,ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ನ್ನು ಸಂಘಟಿಸುವ ಮೂಲಕ ರಾಜ್ಯಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ಸಲಹೆ ನೀಡಿದರು.
ಮಹಿಳಾ ಕಾಂಗ್ರೆಸ್ ಸಂಘಟನೆಯ ಮೂಲಕವೇ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದೆಂದು ತಿಳಿಸಿದರು. ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಬಲ್ಲಣಮಾಡ ಶಾರದ, ಚೊಟ್ಟೆಪಂಡ ದರ್ಶಿನಿ, ಚೇಂದಿರ ಸವಿತಾ, ಮಾಂಗೇರ ಕನ್ನಿಕ, ಕಡೆೇಮಾಡ ರಶ್ಮಿ, ಕಮಲಾ ದಿನೇಶ್, ಬೀನಾ ಅರ್ಜುನ, ಕಡೆೇಮಾಡ ಲಲಿತಾ, ಕಡೆೇಮಾಡ ಭಾರತಿ, ಬಾನಂಡ ಅಶ್ವಿನಿ, ಚೇರಂಡ ಕಾಂತಿ, ಚಂದುರ ವಿದ್ಯಾ್ಯ, ಭವಾನಿ, ದಿವ್ಯಪ್ರಕಾಶ್, ಯಮುನಾ ದಿನೇಶ್, ಈಶ್ವರಪ್ಪ, ಜೈನಿ ಪೂವಯ್ಯ, ಭವಾನಿ ಜಯ, ಕಾವೇರಿ ಜೋಯಪ್ಪ, ಶಾಂತಿ ಸೋಮಯ್ಯ, ಅರ್ಜುನ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.







