ಉಳ್ಳಾಲ: ಸೆಂಟ್ರಲ್ ಕಮಿಟಿ ವತಿಯಿಂದ ರಮಝಾನ್ ಕಿಟ್ ವಿತರಣೆ
ಉಳ್ಳಾಲ, ಜೂ. 5: ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಮಾಸ್ತಿಕಟ್ಟೆ ಕಚೇರಿಯಲ್ಲಿ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಬಡತನದ ಕಾರಣಕ್ಕೆ ಇನ್ನೊಬ್ಬರ ಮುಂದೆ ಎಲ್ಲೂ ಕೈಚಾಚುವ ಪ್ರಯತ್ನ ಮಾಡದೆ ಧಾರ್ಮಿಕ ಚೌಕಟ್ಟಿನಲ್ಲಿದ್ದು ಪ್ರವಾದಿ(ಸ) ಸಂದೇಶ ಜೀವನದಲ್ಲಿ ಅಳವಡಿಸಿ ಮುಂದೆ ಸಾಗಬೇಕಿದೆ ಎಂದರು.
ಸಂಸ್ಥೆ ಜನರ ಸಹಕಾರದಿಂದ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಎಲ್ಲಾ ವರ್ಗದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಹ 150 ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಮೊಹಮ್ಮದ್ ತ್ವಾಹ ಅಧ್ಯಕ್ಷತೆ ವಹಿಸಿದ್ದರು. ಅಹಮ್ಮದ್ ಬಾವ ಕುಂಬ್ಳೆ ಮುಖ್ಯ ಅತಥಿಯಾಗಿ ಭಾಗವಹಿಸಿದ್ದರು.
ಯು.ಎಂ.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಎ.ಎ.ಖಾದರ್, ಯು.ಹೆಚ್.ಸಿದ್ದೀಕ್, ಅಬ್ದುಲ್ ಸಲಾಂ ಮೊದಲಾದವರು ಉಪಸ್ಥಿತರಿದ್ದರು. ಅಹಮ್ಮದ್ ಬಾವ ಕೊಟ್ಟಾರ ಸ್ವಾಗತಿಸಿದರು. ಯು.ಕೆ.ಮುಹಮ್ಮದ್ ಮುಸ್ತಾಫ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್. ಇಸ್ಮಾಯಿಲ್ ಶಾಫಿ ವಂದಿಸಿದರು.







