ಪೇರಲ್ತಡ್ಕ ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಆಶ್ರಯದಲ್ಲಿ ಇಫ್ತಾರ್ ಕೂಟ

ಪುತ್ತೂರು, ಜೂ.5: ಇರ್ದೆ ಪೇರಲ್ತಡ್ಕ ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಆಶ್ರಯದಲ್ಲಿ ಮಜ್ಲಿಸುನ್ನೂರು ಹಾಗೂ ಇಫ್ತಾರ್ ಕೂಟ ಪೇರಲ್ತಡ್ಕದಲ್ಲಿ ನಡೆಯಿತು.
ಸೌಹಾರ್ದ ಕೂಟದ ಸಭಾ ಕಾರ್ಯಕ್ರಮದಲ್ಲಿ ಕೆಐಸಿ ಕುಂಬ್ರದ ಮೆನೇಜರ್ ಕೆ.ಅರ್ ಹುಸೈನ್ ದಾರಿಮಿ ರೆಂಜಲಾಡಿ ಉಪನ್ಯಾಸ ನೀಡಿದರು.
ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಪೇರಲ್ತಡ್ಕ ಇದರ ಗೌರವಾಧ್ಯಕ್ಷ ಅಲ್ ಹಾಜ್ ಪಿ.ಐ. ಇಸ್ಮಾಯಿಲ್ ದಾರಿಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪ್ಯ ಪೊಲೀಸ್ ಠಾಣಾಕಾರಿ ಅಬ್ದುಲ್ ಖಾದರ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ಶುಭ ಹಾರೈಸಿದರು.
ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮೊಹಮ್ಮದ್ ಕುಂಇ ಕೊರಿಂಗಿಲ, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಪೇರಲ್ತಡ್ಕ ಇದರ ಅಧ್ಯಕ್ಷ ಕೆ.ಎಂ. ಅಬ್ದುಲ್ ಹಮಿದ್ ಕೊಮ್ಮೆಮ್ಮಾರ್, ಎಸ್ ಯು ಸಿ ಸಿ ಪೆರಲ್ತಡ್ಕ ಇದರ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಅಲ್ ಅರ್ ಅರಿ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊಯಿದು ಕುಂಇ ಕೋನಡ್ಕ ಉಪಸ್ಥಿತರಿದ್ದರು.
ಹಾಸಿಂ ಬಾಹಲವಿ ತಂಙಳ್ ಕೊರಿಂಗಿಲ ಮತ್ತು ಅಸ್ಸಯ್ಯದ್ ಅನಸ್ ತಂಙಳ್ ಗಂಡಿಬಾಗಿಲು ನೇತೃತ್ವ ವಹಿಸಿದ್ದರು. ಎಸ್ ಯು ಸಿ ಸಿ, ಎಸ್ ಕೆ ಎಸ್ ಎಸ್ ಎಫ್, ಎಸ್ ವೈ ಎಸ್ ಇರ್ದೆ ಬೆಟ್ಟಂಪಾಡಿ ನಿಡ್ಪಳ್ಳಿ ವಲಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.







