ಭಾರತ 7 ಶೇ. ದರದಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲ: ಆರ್ಥಿಕ ಪರಿಣತ

ವಾಶಿಂಗ್ಟನ್, ಜೂ. 5: ಸರಕಾರ ಹೇಳಿಕೊಳ್ಳುವಂತೆ ಭಾರತ ಏಳು ಶೇಕಡ ದರದಲ್ಲಿ ಬೆಳವಣಿಗೆ ಹೊಂದುತ್ತಿಲ್ಲ ಎಂದು ಖ್ಯಾತ ಭಾರತ ಮೂಲದ ಹಣಕಾಸು ತಜ್ಞ ವಿಜಯ್ ಆರ್. ಜೋಶಿ ಹೇಳಿದ್ದಾರೆ.
‘‘ಭಾರತ ವರ್ಷಕ್ಕೆ 7 ಶೇಕಡ ದರದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂಬುದಾಗಿ ಭಾರತದ ರಾಷ್ಟ್ರೀಯ ಖಾತೆಗಳು ತೋರಿಸುತ್ತಿವೆ. ಆದರೆ, ಇತರ ಹಲವಾರು ಹಣಕಾಸು ತಜ್ಞರಂತೆ ನಾನೂ ರಾಷ್ಟ್ರೀಯ ಖಾತೆಗಳ ವರದಿಗಳನ್ನು ನಂಬುವುದಿಲ್ಲ. ಅವುಗಳನ್ನು 2011ರಲ್ಲಿ ಪರಿಷ್ಕರಿಸಲಾಗಿತ್ತು’’ ಎಂದು ಆಕ್ಸ್‌ಫರ್ಡ್ ಮೆರ್ಟನ್ ಕಾಲೇಜ್‌ನ ಎಮರಿಟಸ್ ಫೆಲೊ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಎಮೆರಿಟಸ್ ಆಗಿರುವ ವಿಜಯ್ ಹೇಳಿದರು.
ಅಮೆರಿಕದ ಉನ್ನತ ಚಿಂತಕರ ಚಾವಡಿ ‘ಕ್ಯಾರ್ನಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಶನಲ್ ಪೀಸ್’ ಏರ್ಪಡಿಸಿದ ಚರ್ಚೆಯಲ್ಲಿ ಲಂಡನ್‌ನಲ್ಲಿ ನೆಲೆಸಿರುವ ಹಣಕಾಸು ತಜ್ಞ ಭಾಗವಹಿಸಿ ಮಾತನಾಡುತ್ತಿದ್ದರು.
Next Story





