ಬಿಪಿನ್ ರಾವತ್ ರನ್ನು ಜನರಲ್ ಡಯರ್ ಗೆ ಹೋಲಿಸಿದ ಹೇಳಿಕೆಗೆ ಈಗಲೂ ಬದ್ಧ: ಪಾರ್ಥ ಚಟರ್ಜಿ

ಕಲ್ಕತ್ತ, ಜೂ.5: ಭಾರತೀಯ ಸೇನಾ ಮುಖ್ಯಸ್ಥ ಮೇಜರ್ ಜ.ಬಿಪಿನ್ ರಾವತ್ ರನ್ನು ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಗೆ ಹೋಲಿಸಿದ್ದ ವಿದ್ವಾಂಸ ಪಾರ್ಥ ಚಟರ್ಜಿ ತನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದಿದ್ದಾರೆ.
“ಈ ಬಗ್ಗೆ ನನಗೇನೂ ಹೇಳುವುದಕ್ಕಿಲ್ಲ. ನಾನು ಬರೆಯಬೇಕೆಂಬುವುದನ್ನು ಬರೆದಿದ್ದೇನೆ. ನಾನು ಏನನ್ನೂ ಬದಲಾಯಿಸುವುದಿಲ್ಲ” ಎಂದು ಚಟರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಲೇಖನವೊಂದನ್ನು ಬರೆದಿದ್ದ ಪಾರ್ಥ ಚಟರ್ಜಿ ಮೇಜರ್ ರಾವತ್ ರನ್ನು ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ರೂವಾರಿ ಜನರಲ ಡಯರ್ ಗೆ ಹೋಲಿಸಿದ್ದರು. ಕಾಶ್ಮೀರವು ತನ್ನ ಜನರಲ್ ಡಯರ್ ಕಾಲಘಟ್ಟವನ್ನು ಎದುರಿಸುತ್ತಿದೆ ಎಂದಿದ್ದರು. ಕಾಶ್ಮೀರಿ ಯುವಕನನ್ನು ಮಾನವ ಗುರಾಣಿಯಾಗಿ ಬಳಸಿದ್ದ ಮೇಜರ್ ಲೀತುಲ್ ಗೊಗೊಯ್ ರನ್ನು ಮೇಜರ್ ರಾವತ್ ಬೆಂಬಲಿಸಿ ಹೇಳಿಕೆ ನೀಡಿದ್ದ ನಂತರ ಚಟರ್ಜಿ ಈ ಲೇಖನ ಬರೆದಿದ್ದರು.
Next Story





