ಕಲಾವಿದರಿಂದ ಅರ್ಜಿ ಆಹ್ವಾನ
ಉಡುಪಿ, ಜೂ.5: ಉಡುಪಿ/ದ.ಕ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಶಾಸ್ತ್ರೀಯ ಸಂಗೀತ ಕರ್ನಾಟಕ/ಹಿಂದೂಸ್ಥಾನಿ ವಾದ್ಯ ಸಂಗೀತ, ಶಾಸ್ತ್ರೀಯ ಸಂಗೀತ ಕರ್ನಾಟಕ/ಹಿಂದೂಸ್ಥಾನಿ ಗಾಯನ, ಸುಗಮ ಸಂಗೀತ/ವಚನ ಸಂಗೀತ/ತತ್ವಪದ/ದಾಸರಪದ, ಜನಪದಗೀತೆ, ಸಮೂಹನೃತ್ಯ/ನೃತ್ಯ ರೂಪಕ, ಶಾಸ್ತ್ರೀಯ ನೃತ್ಯ-ಭರತನಾಟ್ಯ-ಕಥಕ್-ಮೋಹಿನಿಯಾಟ್ಟಂ-ಕೂಚುಪುಡಿ-ಒಡಿಸ್ಸಿ (ಸೊಲೋ-ಯುಗಳ ನೃತ್ಯ), ಜನಪದ ಪ್ರದರ್ಶನ ಕಲಾ ತಂಡ, ನಾಟಕ, ಯಕ್ಷಗಾನ, ಗೊಂಬೆಮೇಳ ಸಮೂಹ ಕಾರ್ಯಕ್ರಮ, ಗಮಕ/ಕಥಾ ಕಿರ್ತನ, ಏಕಪಾತ್ರಾಭಿನಯ ಕಾರ್ಯಕ್ರಮ ಆಯೋಜಿಸಲಾಗುವುದು.
ಆಯ್ಕೆಯಾದ ಕಲಾವಿದರು ಇಲಾಖೆ ನಿಗದಿಪಡಿಸಿದ ಸ್ಥಳ ಮತ್ತು ದಿನಾಂಕ ಗಳಂದು ಕಾರ್ಯಕ್ರಮ ನೀಡಬೇಕಾಗುವುದು. 6ರಿಂದ 14 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಗೆ ಚಿಗುರು ಕಾರ್ಯಕ್ರಮ, 15ರಿಂದ 30 ವರ್ಷ ದೊಳಗಿನ ಪ್ರತಿಭಾವಂತ ಯುವ ಕಲಾವಿದರಿಗೆ ಯುವಸೌರಭ ಕಾರ್ಯಕ್ರಮ ಮತ್ತು ಆಕಾಶವಾಣಿ ಬಿ ಹೈ ಗ್ರೇಡ್ ಹಾಗೂ ಸರಕಾರದಿಂದ ಕೊಡಮಾಡುವ ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ಸಾಂಸ್ಕೃತಿಕ ಸೌರಭಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಉಡುಪಿ ಜಿಲ್ಲೆ ಕಲಾವಿದರು ತಮ್ಮ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಕೆ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿ ನಗರ, ಮಣಿಪಾಲ-576104, ಉಡುಪಿ ಜಿಲ್ಲೆ (ದೂರವಾಣಿ:0820-2575552) ಹಾಗೂ ದ.ಕ ಜಿಲ್ಲೆಯ ಕಲಾವಿದರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳುಭವನ, ಉರ್ವಸ್ಟೋರ್, ಜಿಪಂ ಕಛೇರಿ ಬಳಿ, ಮಂಗಳೂರು, ದ.ಕ ಜಿಲ್ಲೆ-576 006 (ದೂರವಾಣಿ: 0824-2451527) ಇಲ್ಲಿಗೆ ಜೂ.12ರೊಳಗೆ ಕಳುಹಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.







