ವ್ಶೆಜ್ಞಾನಿಕ ತಳಹದಿಯ ಮೇಲೆ ಭೌದ್ದಧರ್ಮ:ಎ.ಎಚ್.ರಾಜಾಸಾಬ್

ತುಮಕೂರು.ಜೂ.5: ಬೌದ್ಧಧರ್ಮ ಸದಾ ವೈಜ್ಞಾನಿಕ ತಳಹದಿಯ ಮೇಲೆ ತನ್ನ ಆಚರಣೆಗಳನ್ನು ನಡೆಸುತ್ತಿದ್ದು,ಪ್ರತಿಯೊಬ್ಬರು ಕೂಡ ಬೌದ್ಧದರ್ಮದ ವೈಜ್ಞಾನಿಕ ವಿಚಾರಗಳನ್ನು ಓದುವಂತಾಗಬೇಕು ಎಂದು ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಸೆರಾ-ಜೆ-ಮೊನಾಸ್ಟಿಕ್ ವಿಶ್ವವಿದ್ಯಾನಿಲಯ,ಬೈಲಕುಪ್ಪೆ ಜಂಟಿಯಾಗಿ ಹಮ್ಮಿಕೊಂಡಿದ್ದ 'ಬೌದ್ದ ಧರ್ಮ ಪ್ರಕಾರ ಸಾಮಾಜಿಕ ಪ್ರಜ್ಞೆ' ಎಂಬ ವಿಷಯ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಯಾವ ಆಚರಣೆಗಳು ಅವೈಜ್ಞಾನಿಕತೆಯಿಂದ ಕೂಡಿರುತ್ತವೆಯೋ ಅಂತಹವುಗಳನ್ನು ಆಚರಿಸುವ ಅಗತ್ಯವಿಲ್ಲ. ಎಂಬ ದಲೈಲಾಮರವರ ಮಾತುಗಳನ್ನು ಸ್ಮರಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಮತ್ತು ಸೆರಾ ಜೇ ಮೋನಾಸ್ಟಿಕ್‌ಗಳ ಶೈಕ್ಷಣಿಕ ಒಡಂಬಡಿಕೆಗಳು ಸದಾ ಮುಂದುವರಿದುಕೊಂಡು ಹೋಗುತ್ತಾ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರುಗಳ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ ಕಾರ್ಯಸಾಗಬೇಕು. ಟಿಬೇಟಿಯನ್ನರು ಕರ್ನಾಟಕದ ಬೈಲಕುಪ್ಪೆಗೆ ಬರುವಾಗ ಬೌದ್ಧ ದರ್ಮದ ವೈಜ್ಞಾನಿಕ ಆಚರಣೆಗಳೊಂದಿಗೆ ಮೆಕ್ಕೆಜೋಳದ ಕೃಷಿಯಪದ್ದತಿಯನ್ನು ಕರ್ನಾಟಕಕ್ಕೆ ಪರಿಚಯಿಸಿದರು ಎಂದು ಡಾ.ಎ.ಎಚ್.ರಾಜಾಸಾಬ್ ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಸೆರಾ-ಜೆ-ಮೊನಾಸ್ಟಿಕ್ ವಿವಿಯ ಕುಲಪತಿ ಟೆನ್‌ಜಿನ್ ಜೂಸಾಂಗ್ ರಿನ್‌ಪಂಚ್ ಮಾತನಾಡಿ,ತುಮಕೂರು ವಿಶ್ವವಿದ್ಯಾನಿಲಯ ವಿವೇಕತೆಯಿಂದ ಸಮಾಜ ಮುಖಿಯಾದಂತ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಶ್ಯೆಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರುತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ತಮ್ಮ ವಿಶ್ವವಿದ್ಯಾಲಯದ ಜೊತೆ 2017-18ನೇ ಸಾಲೀನ ಶ್ಯೆಕ್ಷಣಿಕ ಒಡಬಂಡಿಕೆಗೆ ಸಹಿ ಹಾಕಿ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯವೈಖರಿಗೆ ಬಗ್ಗೆ ಅಭಿನಂದನೆಗಳನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ.ನಟರಾಜ್ ಬೂದಾಳ್ಮಾತನಾಡಿ,ಬೌದ್ಧತ್ವ ಎನ್ನುವುದು ಧರ್ಮವಲ್ಲ, ಅದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಅರಿವಿನ ಪ್ರಜ್ಙೆ. ಜ್ಙಾನ ಮತ್ತು ವಿಜ್ಞಾನ ಎರಡು ಸೇರಿ ಲೌಕಿಕ ಜೀವನದ ಅನುಭವ ಆಧ್ಯಾತ್ಮವಾಗಬೇಕು. ಪ್ರಸ್ತುತ ದಿನಮಾನಗಳಲ್ಲಿ ಇಲ್ಲದೇ ಇರುವ ಅಲೌಕಿಕ ಜಗತ್ತು ಹಾಗೂ ಮೂಢನಂಬಿಕೆಗಳಿಂದ ಸಾಮಾನ್ಯ ಜ್ಞಾನವನ್ನು ಪ್ರಜ್ಞೆಯನ್ನು ಮರೆಮಾಚಲಾಗಿದೆ.ಬುದ್ದತ್ವದಲ್ಲಿ ಪ್ರಜಾಪ್ರಭುತ್ವ, ವಿಜ್ಞಾನ, ಬುದ್ಧತ್ವದ ವಿಚಾರಗಳು ಈ ಮೂರು ಸಾಂಸ್ಥಿಕ ವಿಚಾರಗಳಿಂದ ಇಂದಿನ ಸಾಮಾಜಿಕ ವ್ಯವಸ್ಥೆಗೆ ಪ್ರಜ್ಞೆಯನ್ನು ಸೃಷ್ಠಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕವಿ ಕೆ.ಬಿ.ಸಿದ್ದಯ್ಯ,ಪ್ರಗತಿಪರ ಚಿಂತಕಪ್ರೊ.ಕೆ.ದೊರೈ ರಾಜ್,ನ್ಯಾಯಮೂರ್ತಿ ಬಾಬಾ ಸಾಹೇಬ್ ಜಿನರಾಳ್ಕ ಉಪಸ್ಥಿತರಿದ್ದರು.







